ಧರ್ಮಕ್ಷೇತ್ರೇ ಕುರುಕ್ಷೇತ್ರೇ
ಧೃತರಾಷ್ಟ್ರ-ಸಂಜಯರ ಸಂವಾದದಿಂದ ಈ ಗೀತೆಯು ಆರಂಭವಾಗುವುದು.
ಧೃತರಾಷ್ಟ್ರನಿಗೆ ಯುದ್ದದ ವಿಚಾರವನ್ನೆಲ್ಲ ಅರುಹಲು ವೇದವ್ಯಾಸರು
ಸಂಜಯನನ್ನು ನೇಮಿಸಿದ್ದಾರೆ. ಅವನು ಅಲ್ಲಿಯ ಸಕಲ ಘಟನೆಗಳನ್ನು
ಧೃತರಾಷ್ಟ್ರನಿಗೆ ತಿಳಿಸುತ್ತಿರುವನು. '"ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಸೇರಿದ
ಪಾಂಡವರು ಹಾಗೂ ನನ್ನವರು ಅಲ್ಲಿ ಏನು ನಡೆಸಿದರು?'' ಎಂದು ಧೃತರಾಷ್ಟ್ರ
ಪ್ರಶ್ನಿಸುತ್ತಾನೆ. ಇನ್ನೂ ದುರ್ಯೋಧನಾದಿಗಳನ್ನು ""ಮಾಮಕಾಃ' ತನ್ನವರು
ಎಂಬ ವ್ಯಾಮೋಹದಿಂದಲೇ ಕರೆಯುತ್ತಾನೆ, ಧೃತರಾಷ್ಟ್ರನ ಹೊರಗಿನ
ಕಣ್ಣುಗಳಂತೆ ಒಳಗಿನ ಕಣ್ಣು ಇನ್ನೂ ಕುರುಡೇ ಆಗಿದೆ. ಸಮರವನ್ನು ಹೇಗೆ
ಮಾಡಿದರೆಂದು ಕೇಳದೆ ಏನು ಮಾಡಿದರೆಂದು ಕೇಳುವನು. ""ಧರ್ಮಕ್ಷೇತ್ರವಾದ
ಕುರುಕ್ಷೇತ್ರಕ್ಕೆ ತಲುಪಿದ ಕೂಡಲೇ ಧಾರ್ಮಿಕರಾದ ವಾಂಡವರಲ್ಲಿ
ಧರ್ಮವ್ರವೃತ್ತಿ ಯು ಜಾಗೃತವಾಗಿ ಯುದ್ಧವು ಬೇಡವೆಂದು ರಾಜ್ಯವನ್ನೆಲ್ಲ
ನಮ್ಮ: ವರಿಗೆ ನೀಡಿದರೆ?'' ಎಂಬ ಸ್ವಾ ರ್ಥವೂರ್ಣ ಆಶಂಕೆಯಿಂದ ಧೃತರಾಷ್ಟ್ರನು
ಅಲ್ಲಿ ಏನು ಮಾಡಿದರೆಂದು ಪ್ರಶ್ನಿಸುವನು. ಹಿಂದೆ ಸಂಜಯನ ಮೂಲಕ
ವಾಂಡವರಿಗೆ, ""ನಮ್ಮ ಮಕ್ಕಳು ದುಷ್ಟರು, ಕಲಹಪ್ರಿಯರು, ನೀವಾದರೋ
ಧಾರ್ಮಿಕರು, ಶಾಂತಿಪ್ರಿಯರು. ಯುದ್ಧದಿಂದ ಬಹಳ ಅನರ್ಥವಿದೆ.
ಆದ್ದರಿಂದ. ನೀವಾಗಿಯೇ. ಶಾಂತಿದೃಷ್ಟಿಯಿಂದ ರಾಜ್ಯವನ್ನು
ದುರ್ಯೋಧನಾದಿಗಳಿಗೆ ಬಿಟ್ಟುಕೊಟ್ಟು ಅರಣ್ಯದಲ್ಲಿ ಶಾಂತಿ ಜೀವನವನ್ನು
ನಡೆಸುವುದು ಒಳ್ಳೆಯದು” ಎಂಬ ಕುಹಕದೃಷ್ಟಿಯ ಸಂದೇಶವನ್ನು
ಕಳುಹಿಸಿದ್ದನು. ಈ ಕುರುಕ್ಷೇತ್ರದಲ್ಲಾದರೂ ಪಾಂಡವರಿಗೆ ಅಥವಾ ಅವರಲ್ಲಿ
ಒಬ್ಬರಿಗಾಗಲಿ ಈ ಸಂದೇಶದ ವರಿಣಾಮವೇನಾದರೂ ಆಗಿರಬಹುದೆಂಬ
ನಿರೀಕ್ಷೆ ಯಿಂದ ಧೃತರಾಷ್ಟ್ರನು ಅಂತು ಪ್ರಶ್ನಿಸುತ್ತಾ ನೆ. ನಿಜವಾಗಿಯೂ ಅವನ
ನಿರೀಕ್ಷೆಯಂತೆಯೇ ಮುಂದೆ ನಡೆಯುತ್ತದೆ. ಧೃತರಾಷ್ಟ್ರನ ಸಂದೇಶದಿಂದ
ಪ್ರಭಾವಿತನಾದಂತೆ ಅದೇಮಾತುಗಳನ್ನೇ ಪುನರುಚ್ಚರಿಸಿ ಅರ್ಜುನನು ಯುದ್ದ
ನಿವೃತ್ತನಾಗುವನು. ಧೃತರಾಷ್ಟ್ರನ ಕಪಟನೀತಿಯು ವಲಕಾರಿಯಾಗದಿರಲಿಲ್ಲ.
ಧೃತರಾಷ್ಟ್ರನ ಪ್ರಶ್ನೆಗೆ -ಸಂಜಯನು ಹೀಗೆ ಉತ್ತರಿಸುತ್ತಾನೆ: ಹದಿಮೂರು
ವರುಷ ವನವಾಸ, ಅಜ್ಞಾತವಾಸಗಳನ್ನು ನಡೆಸಿದ ವಾಂಡವರಿಗೆ ಸೈನ್ಯವನ್ನು
ಸಂಗ್ರಹಿಸಲು ಸಾಧ್ಯವಾಗದೆ ತನ್ನ ಮಹಾಸ್ಥೆನ್ಯದ ಮುಂದೆ ಅವರು
ತತ್ತರಿಸಿಹೋಗುವರೆಂದು ಭಾವಿಸಿದ್ದ ದುರ್ಯೋಧನನಿಗೆ ವಾಂಡವರ ಈ
ಮಹಾಸ್ಥನ್ಯವನ್ನು ಕಂಡು ಭಯವೇ ಆಗುವುದು. ಸಭಾಪರ್ವದಲ್ಲಿ ತಮ್ಮೆಲ್ಲರನ್ನೂ
ಸಂಹರಿಸುವುದಾಗಿ ಭೀಮಸೇನನು ಮಾಡಿದ ಭೀಕರ ಪ್ರತಿಜ್ಞೆಯ ಅವಸರದಲ್ಲಿ
ದುರ್ಯೋಧನಾದಿಗಳು ದ್ರೋಣಾಚಾರ್ಯರಲ್ಲಿ ಶರಣಾಗತರಾದಾಗ ಅವರೇ
ವ್ರಾಣರಕ್ಷಣೆಯ ಆಶ್ವಾಸನವನ್ನು ನೀಡಿದ್ದರು. ಈಗ ಸಂಭ್ರಾಂತನಾದ
ದುರ್ಯೋಧನನು ದ್ರೋಣಾಚಾರ್ಯರ ಸಮೀಪಕ್ಕೆ ಆಗಮಿಸಿ, ಉಭಯ
ಸೈನ್ಯಗಳ ವೀರರ ವಿವರಗಳನ್ನು ತಿಳಿಸಿ, ಭೀಷ್ಮರಿಂದ ರಕ್ಷಿತವಾದ ನಮ್ಮ ಸೈನ್ಯವು
ಭೀಮಸೇನನ ಸಂರಕ್ಷಣೆಯನ್ನು ಹೊಂದಿದ ಪಾಂಡವ ಸೈನ್ಯವನ್ನು ಎದುರಿಸಲು
ಅಸಮರ್ಥವಾಗಿದೆಯೆಂದು ತನ್ನ ಭಯ, ಆಶಂಕೆಗಳನ್ನು ವ್ಯಕ್ತಪಡಿಸಿದ್ದಾನೆ.
ಪಾಂಡವ ಸೈನ್ಯದಲ್ಲಿ ಸೇರಿದವರೆಲ್ಲ ದುಷ್ಟಶಕ್ತಿಯ ನಿಗ್ರಹದ
ಸದುದ್ದೇಶದಿಂದ ಪ್ರೇರಿತರಾಗಿ ನಿಂತಿದಾರೆ. ತತ ನಿಷೆಯ ದಿವವಾದ ಸೆತಿಕ
ಬಲದ ಹಿನ್ನೆಲೆ ಅವರಿಗಿದೆ. ವಿಶಿಷ್ಟವೂ ಸತ್ತ್ವಪೂರ್ಣವೂ ಆದ ಧ್ಯೇಯದಿಂದ
ಹೋರಾಟಕ್ಕೆ ಪ್ರವೃತ್ತರಾದ ಈ ಕ್ರಾಂತಿಕಾರಿ ಮನೋವೃತ್ತಿಯ ವೀರಸೈನಿಕರು
ಶುದ್ಧ ಭಾಗವತೋತ್ತಮನೂ ತತ್ತ್ವನಿಷ್ಠೆಯಲ್ಲಿ ಅದ್ವಿತೀಯನೂ ಆದ
ಭೀಮಸೇನನಂತಹ ಮಹಾ ನೇತಾರನನ್ನು ಪಡೆದಿರುವಾಗ ಇಂತಹ
ಹಿನ್ನೆಲೆಯಿಲ್ಲದ ದುರ್ಯೋಧನನ ಸೈನ್ಯವು ಇವರನ್ನು ಹೇಗೆ ಎದುರಿಸೀತು ?
ಭೀಷ್ಫರೇನೋ ಮಹಾ ವೀರರೇ। ಆದರೆ ಅವರು ತತ್ತ್ವಕ್ಕಾಗಿ ಹೋರಾಡದೆ
ತಮ್ಮ ಮನಸ್ಸಿಗೆ ವಿರುದ್ಧವಾಗಿ ದುರ್ಯೋಧನನ ಹಂಗಿಗಾಗಿ
ಹೋರಾಡುತ್ತಿದ್ದಾರೆ. ಇವರನ್ನೆಲ್ಲ ಪ್ರಭಾವಿತಗೊಳಿಸಬೇಕಾದ ವಿಶಿಷ್ಟ
ಧ್ಯೇಯವೇ ಅಲ್ಲಿಲ್ಲ. ತಾವೆಲ್ಲ ದುಷ್ಟಕ್ಕತ್ಕವನ್ನು ಮಾಡುತ್ತಿರುವೆವೆಂದು
ತಿಳಿದಿದ್ದರೂ ಆರ್ಥಿಕ ಬಂಧನಕ್ಕೂ ದ್ವೇಷ ದುರುದ್ದೇಶಗಳಿಗೂ ಒಳಗಾಗಿ
ಹೋರಾಟಕ್ಕೆ ಪ್ರವೃತ್ತರಾದವರೇ ಹೆಚ್ಚು ಮಂದಿ. ಹೀಗಾಗಿ ತನ್ನ ಸೈನ್ಯದಲ್ಲಿ
ಆಂತರಿಕ ಸತ್ತ್ವವೂ ನೈತಿಕಬಲವೂ ಇಲ್ಲವೆಂದು ಅರಿತು, ಭೀಷ್ಮ-ಭೀಮರ
ನೇತೃತ್ವವನ್ನು ಈ ದೃಷ್ಟಿಯಿಂದ ತುಲನೆಮಾಡಿ ತನ್ನ ಕಳವಳವನ್ನು
ದ್ರೋಣಾಚಾರ್ಯರಲ್ಲಿ ವ್ಯಕ್ತಪಡಿಸುತ್ತಾನೆ. ದುರ್ಯೋಧನನ ಈ
ಸಂಕೋಚವನ್ನು ಊಹಿಸಿ ಭೀಷ್ಮರೂ ಅದನ್ನನುಸರಿಸಿ ಉಳಿದ ಸೈನಿಕರೂ
ಉತ್ತೇಜಕವಾಗಿ ಶಂಖಘೋಷವನ್ನು ಮಾಡುವರು. ವಾಂಡವರೂ ಇದಕ್ಕೆ
ಪ್ರತಿಯಾಗಿ ಶಂಖಘೋಷದ ಉತ್ತರವನ್ನು ನೀಡುವರು.
ತತಃ ಶ್ವೇತೈರ್ಷಯೈರ್ಯಕ್ತೇ
ಮಹತಿ ಸ್ಕಂದನೇ ಸ್ಥಿತೌ |
ಮಾಧವಃ ಪಾಂಡವಶ್ಚೆವ
ದಿವ್ಯೌ ಶಂಖೌ ಪ್ರದದ್ಧತುಃ ॥
"ಬಿಳಿಯ ಕುದುರೆಗಳನ್ನು ಜೋಡಿಸಿದ ದಿವ್ಯರಥದಲ್ಲಿ ಕುಳಿತ
ಕೃಷ್ಣಾರ್ಜುನರು ದಿವ್ಯಶಂಖಗಳನ್ನು ಊದಿದರು.'' ಈ ಪದ್ಯವು ಮುಂದಿನ
ಘಟನೆಯನ್ನು ಸೂಚ್ಯವಾಗಿ ತಿಳಿಸುತ್ತದೆ. ನಾಲ್ಕು ವೇದಗಳಿಂದ ಕೂಡಿದ
ಮಹಾಶಾಸ್ತ್ರದಲ್ಲಿ ಸಮಾವಿಷ್ಣರಾಗಿ ಕೃಷ್ಣಾರ್ಜುನರು ಓಂಕಾರ ನಾದವನ್ನು
ಅರ್ಥಾತ್ ಶಾಂತಿಮಂತ್ರವನ್ನು ಹಾಡಿದರು-ಎಂದು ಮುಂದೆ ಅರ್ಜುನನಿಗೆ
ಭಗವಂತನು ನೀಡಿರುವ ಉಪದೇಶದ ಸೂಚನೆಯನ್ನು ಇಲ್ಲಿ ಮಾಡಿದ್ದಾರೆ.
ಅತ್ರ ಶೂರಾಃ ಮಹಾ ಇಷು ಆಸಾಃ ಭೀಮಾರ್ಜುನ ಸಮಾಃ ಯುಧಿ |
ಯುಯುಧಾನಃ ವಿರಾಟಃ ಚ ದ್ರುಪದಃ ಚ ಮಹಾರಥಃ -- ಇಲ್ಲಿ ಎಲ್ಲರೂ ವೀರರು. ಹಿರಿಯ ಬಿಲ್ಲಾರರು. ಕಾದುವಲ್ಲಿ
ಭೀಮಾರ್ಜುನರಿಗೆ ಸಾಟಿಯಾದವರು. ಸಾತ್ಯಕಿ, ವಿರಾಟ ಮತ್ತು ದ್ರುಪದ ಕೂಡಾ ಹಿರಿಯ ತೇರಾಳು.
ಪಾಂಡವರ ಸೈನ್ಯವನ್ನು ನೋಡಿ ಮಾನಸಿಕವಾಗಿ ತಳಮಳಗೊಂಡ ದುರ್ಯೋಧನ, ದ್ರೋಣಾಚಾರ್ಯರ ಬಳಿ
ಹೋಗಿ, ಪಾಂಡವ ಸೇನೆಯ ಬಗ್ಗೆ, ಅಲ್ಲಿರುವ ವೀರರ ಬಗ್ಗೆ ಮಾತನಾಡುತ್ತಾನೆ. ಸಾಮಾನ್ಯವಾಗಿ ನಮಗೆ ಯಾರ
ಬಗ್ಗೆ ಭಯವಿದೆಯೋ, ಅವರೇ ಎಲ್ಲಾ ಕಡೆ ಕಂಡಂತೆ ಭಾಸವಾಗುತ್ತದೆ. ಕಂಸನಿಗೆ ಕೃಷ್ಣ ಕಾಣಿಸಿಕೊಂಡಂತೆ. ಇದು
ಮನಃಶಾಸ್ತ್ರ. ಇಲ್ಲಿ ದುರ್ಯೋಧನನಿಗೆ ಭೀಮಾರ್ಜುನರ ಭಯ. ಆ ಭಯದಿಂದಲೇ ಹೇಳುತ್ತಾನೆ "ಅಲ್ಲಿರುವ
ವೀರರೆಲ್ಲರೂ ಭೀಮಾರ್ಜುನರಿಗೆ ಸಮನಾದವರು. ಅಸಾಧಾರಣ ಬಿಲ್ಲನ್ನು ಹಿಡಿದು ಹೋರಾಡಿ ಗೆಲ್ಲಬಲ್ಲ
ಮಹಾವೀರರು" ಎಂದು. ವಾಸ್ತವವಾಗಿ ಆಗಿನ ಕಾಲದಲ್ಲಿ ಇದ್ದ ಮಹಾಬಿಲ್ಲು ಎಂದರೆ ಗಾಂಢೀವ. ಗಾಂಢೀವ
ಹಿಡಿದು ಯುದ್ಧ ಮಾಡಬಲ್ಲವರೆಂದರೆ ಅರ್ಜುನ-ಭೀಮ ಮತ್ತು ಶ್ರೀಕೃಷ್ಣ. ಈ ಸಂದರ್ಭದಲ್ಲಿ ದುರ್ಯೋಧನನಿಗೆ
ಪಾಂಡವರ ಪಡೆಯಲ್ಲಿನ ಮಹಾವೀರರೆಲ್ಲರೂ ಭೀಮಾರ್ಜುನರಿಗೆ ಸಮನಾದ ಬಿಲ್ಲಾರರಾಗಿ ಕಾಣುತ್ತಾರೆ. ಇದು
ದುರ್ಯೋಧನನ ಮನುಃಸ್ಥಿತಿಯನ್ನು ಹೇಳುತ್ತದೆ.
ಮುಂದೆ ದುರ್ಯೋಧನ ಪಾಂಡವರ ಕಡೆಗಿನ ವೀರರ ಹೆಸರನ್ನು ಒಂದೊಂದಾಗಿ ಹೇಳಲಾರಂಭಿಸುತ್ತಾನೆ.
“ಸಾತ್ಯಕಿ, ವಿರಾಟ, ದ್ರುಪದರಂತಹ ಮಹಾರಥರು ಪಾಂಡವ ಸೇನೆಯಲ್ಲಿದ್ದಾರೆ” ಎನ್ನುತ್ತಾನೆ. ಇಲ್ಲಿ ಈ ಮೂರು
ಹೆಸರು ಬರಲು ವಿಶೇಷ ಕಾರಣವಿದೆ. ಈ ಮೂವರೂ ಕೂಡಾ ಕೌರವರ ಕಡೆಗೆ ಬರಬೇಕಾಗಿತ್ತು.
ಜರಾಸಂಧನೊಡನಿದ್ದು, ಕೃಷ್ಣನ ವಿರುದ್ಧ ಹೋರಾಡಿದ ದ್ರುಪದನನ್ನು ಹಿಂದೆ ಪಾಂಡವರು ಬಂಧಿಸಿ, ಅವನ
ಅರ್ಧರಾಜ್ಯವನ್ನು ಕಿತ್ತುಕೊಂಡು ದ್ರೋಣನಿಗೆ ಕೊಟ್ಟ ವಿಷಯ ಈ ಹಿಂದೆ ನೋಡಿದ್ದೇವೆ. ಆದರೆ ಪಾಂಡವರಿಗೆ
ದ್ರೌಪದಿಯನ್ನು ಕೊಟ್ಟು ಸಂಬಂಧ ಬೆಳೆಸಿದ ದ್ರುಪದ-ಪಾಂಡವರ ಪರ ನಿಂತ. ವಿರಾಟ ಈ ಹಿಂದೆ ಕೀಚಕನಿಗೆ
ಹೆದರಿಕೊಂಡು ರಾಜ್ಯಭಾರ ಮಾಡುತ್ತಿದ್ದ. ಕೀಚಕನನ್ನು ಭೀಮ ಕೊಂದಿದ್ದರಿಂದ ವಿರಾಟ ಪಾಂಡವರ
ಪಾಳಯವನ್ನು ಸೇರಿಕೊಂಡ. ಇನ್ನು. ಬಲರಾಮನ ಆಣತಿಯನ್ನು ಮೀರದ ಸಾತ್ಯಕಿ. ಇಲ್ಲಿ ಬಲರಾಮ
ಯುದ್ಧದಲ್ಲಿ ತಾನು ತಲೆ ಹಾಕುವುದಿಲ್ಲ. ಎಂದು ತೀರ್ಥಯಾತ್ರೆಗೆ ಹೊರಟು ಹೋಗಿರುವುದರಿಂದ ಸಾತ್ಯಕಿ
ಕೂಡಾ ಪಾಂಡವರ ಪರ ನಿಂತ. ಹೀಗೆ ಈ ಪ್ರತಿಯೊಂದು ಹೆಸರನ್ನು ತೆಗೆದು ಹೇಳುತ್ತಿರುವ ದುರ್ಯೋಧನನಿಗೆ
ಅಂತರಂಗದಲ್ಲಿ “ಅಯ್ಯೋ ನನ್ನ ಕಡೆ ಇರಬೇಕಾದ ಈ ಮಹಾರಥರು ಪಾಂಡವರ ಪಕ್ಷದಲ್ಲಿದ್ದಾರಲ್ಲ” ಎನ್ನುವ
ನೋವಿದೆ. ಇದು ದುರ್ಯೋಧನನ ವಿಷಾದ! ಆತ ತನ್ನ ಯುದ್ಧತಂತ್ರವನ್ನು ರೂಪಿಸುವುದನ್ನು ಬಿಟ್ಟು, ಇಲ್ಲಿ ತನ್ನ
ಕಡೆಗೆ ಬರಬೇಕಾಗಿದ್ದವರು ಪಾಂಡವರ ಕಡೆ ಸೇರಿದ್ದಾರಲ್ಲಾ ಎಂದು ವಿಷಾದಿಸುವುದರಲ್ಲಿ ಕಾಲಹರಣ
ಮಾಡುತ್ತಿದ್ದಾನೆ. ಇನ್ನೂ ಅನೇಕ ವೀರರ ಹೆಸರನ್ನು ದುರ್ಯೋಧನ ಪಟ್ಟಿ ಮಾಡುತ್ತಾನೆ.
(4)
‘Here there are courageous warriors with mighty bows, the equals of Bhima
and Arjuna in battle—Yuyudhana,8 Virata, Drupada and other great
warriors.’9
4. “Here are heroes, mighty archers, equal in battle to Bhima and Arjuna, Yuyudhana, Virata and Drupada, of the great car (mighty warriors),
Source: Bhagavad Gita — pages/page-0028.txt p.28, lines 18-19; pages/page-0028.txt p.28, lines 21-22
Shared across BG 1.1–1.14
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಧೃತರಾಷ್ಟ್ರ-ಸಂಜಯರ ಸಂವಾದದಿಂದ ಈ ಗೀತೆಯು ಆರಂಭವಾಗುವುದು. ಧೃತರಾಷ್ಟ್ರನಿಗೆ ಯುದ್ದದ ವಿಚಾರವನ್ನೆಲ್ಲ ಅರುಹಲು ವೇದವ್ಯಾಸರು ಸಂಜಯನನ್ನು ನೇಮಿಸಿದ್ದಾರೆ. ಅವನು ಅಲ್ಲಿಯ ಸಕಲ ಘಟನೆಗಳನ್ನು ಧೃತರಾಷ್ಟ್ರನಿಗೆ ತಿಳಿಸುತ್ತಿರುವನು. '"ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಸೇರಿದ ಪಾಂಡವರು ಹಾಗೂ ನನ್ನವರು ಅಲ್ಲಿ ಏನು ನಡೆಸಿದರು?'' ಎಂದು ಧೃತರಾಷ್ಟ್ರ ಪ್ರಶ್ನಿಸುತ್ತಾನೆ. ಇನ್ನೂ ದುರ್ಯೋಧನಾದಿಗಳನ್ನು ""ಮಾಮಕಾಃ' ತನ್ನವರು ಎಂಬ ವ್ಯಾಮೋಹದಿಂದಲೇ ಕರೆಯುತ್ತಾನೆ, ಧೃತರಾಷ್ಟ್ರನ ಹೊರಗಿನ ಕಣ್ಣುಗಳಂತೆ ಒಳಗಿನ ಕಣ್ಣು ಇನ್ನೂ ಕುರುಡೇ ಆಗಿದೆ. ಸಮರವನ್ನು ಹೇಗೆ ಮಾಡಿದರೆಂದು ಕೇಳದೆ ಏನು ಮಾಡಿದರೆಂದು ಕೇಳುವನು. ""ಧರ್ಮಕ್ಷೇತ್ರವಾದ ಕುರುಕ್ಷೇತ್ರಕ್ಕೆ ತಲುಪಿದ ಕೂಡಲೇ ಧಾರ್ಮಿಕರಾದ ವಾಂಡವರಲ್ಲಿ ಧರ್ಮವ್ರವೃತ್ತಿ ಯು ಜಾಗೃತವಾಗಿ ಯುದ್ಧವು ಬೇಡವೆಂದು ರಾಜ್ಯವನ್ನೆಲ್ಲ ನಮ್ಮ: ವರಿಗೆ ನೀಡಿದರೆ?'' ಎಂಬ ಸ್ವಾ ರ್ಥವೂರ್ಣ ಆಶಂಕೆಯಿಂದ ಧೃತರಾಷ್ಟ್ರನು ಅಲ್ಲಿ ಏನು ಮಾಡಿದರೆಂದು ಪ್ರಶ್ನಿಸುವನು. ಹಿಂದೆ ಸಂಜಯನ ಮೂಲಕ ವಾಂಡವರಿಗೆ, ""ನಮ್ಮ ಮಕ್ಕಳು ದುಷ್ಟರು, ಕಲಹಪ್ರಿಯರು, ನೀವಾದರೋ ಧಾರ್ಮಿಕರು, ಶಾಂತಿಪ್ರಿಯರು. ಯುದ್ಧದಿಂದ ಬಹಳ ಅನರ್ಥವಿದೆ. ಆದ್ದರಿಂದ. ನೀವಾಗಿಯೇ. ಶಾಂತಿದೃಷ್ಟಿಯಿಂದ ರಾಜ್ಯವನ್ನು ದುರ್ಯೋಧನಾದಿಗಳಿಗೆ ಬಿಟ್ಟುಕೊಟ್ಟು ಅರಣ್ಯದಲ್ಲಿ ಶಾಂತಿ ಜೀವನವನ್ನು ನಡೆಸುವುದು ಒಳ್ಳೆಯದು” ಎಂಬ ಕುಹಕದೃಷ್ಟಿಯ ಸಂದೇಶವನ್ನು ಕಳುಹಿಸಿದ್ದನು. ಈ ಕುರುಕ್ಷೇತ್ರದಲ್ಲಾದರೂ ಪಾಂಡವರಿಗೆ ಅಥವಾ ಅವರಲ್ಲಿ ಒಬ್ಬರಿಗಾಗಲಿ ಈ ಸಂದೇಶದ ವರಿಣಾಮವೇನಾದರೂ ಆಗಿರಬಹುದೆಂಬ ನಿರೀಕ್ಷೆ ಯಿಂದ ಧೃತರಾಷ್ಟ್ರನು ಅಂತು ಪ್ರಶ್ನಿಸುತ್ತಾ ನೆ. ನಿಜವಾಗಿಯೂ ಅವನ ನಿರೀಕ್ಷೆಯಂತೆಯೇ ಮುಂದೆ ನಡೆಯುತ್ತದೆ. ಧೃತರಾಷ್ಟ್ರನ ಸಂದೇಶದಿಂದ ಪ್ರಭಾವಿತನಾದಂತೆ ಅದೇಮಾತುಗಳನ್ನೇ ಪುನರುಚ್ಚರಿಸಿ ಅರ್ಜುನನು ಯುದ್ದ ನಿವೃತ್ತನಾಗುವನು. ಧೃತರಾಷ್ಟ್ರನ ಕಪಟನೀತಿಯು ವಲಕಾರಿಯಾಗದಿರಲಿಲ್ಲ. ಧೃತರಾಷ್ಟ್ರನ ಪ್ರಶ್ನೆಗೆ -ಸಂಜಯನು ಹೀಗೆ ಉತ್ತರಿಸುತ್ತಾನೆ: ಹದಿಮೂರು ವರುಷ ವನವಾಸ, ಅಜ್ಞಾತವಾಸಗಳನ್ನು ನಡೆಸಿದ ವಾಂಡವರಿಗೆ ಸೈನ್ಯವನ್ನು ಸಂಗ್ರಹಿಸಲು ಸಾಧ್ಯವಾಗದೆ ತನ್ನ ಮಹಾಸ್ಥೆನ್ಯದ ಮುಂದೆ ಅವರು ತತ್ತರಿಸಿಹೋಗುವರೆಂದು ಭಾವಿಸಿದ್ದ ದುರ್ಯೋಧನನಿಗೆ ವಾಂಡವರ ಈ ಮಹಾಸ್ಥನ್ಯವನ್ನು ಕಂಡು ಭಯವೇ ಆಗುವುದು. ಸಭಾಪರ್ವದಲ್ಲಿ ತಮ್ಮೆಲ್ಲರನ್ನೂ ಸಂಹರಿಸುವುದಾಗಿ ಭೀಮಸೇನನು ಮಾಡಿದ ಭೀಕರ ಪ್ರತಿಜ್ಞೆಯ ಅವಸರದಲ್ಲಿ ದುರ್ಯೋಧನಾದಿಗಳು ದ್ರೋಣಾಚಾರ್ಯರಲ್ಲಿ ಶರಣಾಗತರಾದಾಗ ಅವರೇ ವ್ರಾಣರಕ್ಷಣೆಯ ಆಶ್ವಾಸನವನ್ನು ನೀಡಿದ್ದರು. ಈಗ ಸಂಭ್ರಾಂತನಾದ ದುರ್ಯೋಧನನು ದ್ರೋಣಾಚಾರ್ಯರ ಸಮೀಪಕ್ಕೆ ಆಗಮಿಸಿ, ಉಭಯ ಸೈನ್ಯಗಳ ವೀರರ ವಿವರಗಳನ್ನು ತಿಳಿಸಿ, ಭೀಷ್ಮರಿಂದ ರಕ್ಷಿತವಾದ ನಮ್ಮ ಸೈನ್ಯವು ಭೀಮಸೇನನ ಸಂರಕ್ಷಣೆಯನ್ನು ಹೊಂದಿದ ಪಾಂಡವ ಸೈನ್ಯವನ್ನು ಎದುರಿಸಲು ಅಸಮರ್ಥವಾಗಿದೆಯೆಂದು ತನ್ನ ಭಯ, ಆಶಂಕೆಗಳನ್ನು ವ್ಯಕ್ತಪಡಿಸಿದ್ದಾನೆ. ಪಾಂಡವ ಸೈನ್ಯದಲ್ಲಿ ಸೇರಿದವರೆಲ್ಲ ದುಷ್ಟಶಕ್ತಿಯ ನಿಗ್ರಹದ ಸದುದ್ದೇಶದಿಂದ ಪ್ರೇರಿತರಾಗಿ ನಿಂತಿದಾರೆ. ತತ ನಿಷೆಯ ದಿವವಾದ ಸೆತಿಕ ಬಲದ ಹಿನ್ನೆಲೆ ಅವರಿಗಿದೆ. ವಿಶಿಷ್ಟವೂ ಸತ್ತ್ವಪೂರ್ಣವೂ ಆದ ಧ್ಯೇಯದಿಂದ ಹೋರಾಟಕ್ಕೆ ಪ್ರವೃತ್ತರಾದ ಈ ಕ್ರಾಂತಿಕಾರಿ ಮನೋವೃತ್ತಿಯ ವೀರಸೈನಿಕರು ಶುದ್ಧ ಭಾಗವತೋತ್ತಮನೂ ತತ್ತ್ವನಿಷ್ಠೆಯಲ್ಲಿ ಅದ್ವಿತೀಯನೂ ಆದ ಭೀಮಸೇನನಂತಹ ಮಹಾ ನೇತಾರನನ್ನು ಪಡೆದಿರುವಾಗ ಇಂತಹ ಹಿನ್ನೆಲೆಯಿಲ್ಲದ ದುರ್ಯೋಧನನ ಸೈನ್ಯವು ಇವರನ್ನು ಹೇಗೆ ಎದುರಿಸೀತು ? ಭೀಷ್ಫರೇನೋ ಮಹಾ ವೀರರೇ। ಆದರೆ ಅವರು ತತ್ತ್ವಕ್ಕಾಗಿ ಹೋರಾಡದೆ ತಮ್ಮ ಮನಸ್ಸಿಗೆ ವಿರುದ್ಧವಾಗಿ ದುರ್ಯೋಧನನ ಹಂಗಿಗಾಗಿ ಹೋರಾಡುತ್ತಿದ್ದಾರೆ. ಇವರನ್ನೆಲ್ಲ ಪ್ರಭಾವಿತಗೊಳಿಸಬೇಕಾದ ವಿಶಿಷ್ಟ ಧ್ಯೇಯವೇ ಅಲ್ಲಿಲ್ಲ. ತಾವೆಲ್ಲ ದುಷ್ಟಕ್ಕತ್ಕವನ್ನು ಮಾಡುತ್ತಿರುವೆವೆಂದು ತಿಳಿದಿದ್ದರೂ ಆರ್ಥಿಕ ಬಂಧನಕ್ಕೂ ದ್ವೇಷ ದುರುದ್ದೇಶಗಳಿಗೂ ಒಳಗಾಗಿ ಹೋರಾಟಕ್ಕೆ ಪ್ರವೃತ್ತರಾದವರೇ ಹೆಚ್ಚು ಮಂದಿ. ಹೀಗಾಗಿ ತನ್ನ ಸೈನ್ಯದಲ್ಲಿ ಆಂತರಿಕ ಸತ್ತ್ವವೂ ನೈತಿಕಬಲವೂ ಇಲ್ಲವೆಂದು ಅರಿತು, ಭೀಷ್ಮ-ಭೀಮರ ನೇತೃತ್ವವನ್ನು ಈ ದೃಷ್ಟಿಯಿಂದ ತುಲನೆಮಾಡಿ ತನ್ನ ಕಳವಳವನ್ನು ದ್ರೋಣಾಚಾರ್ಯರಲ್ಲಿ ವ್ಯಕ್ತಪಡಿಸುತ್ತಾನೆ. ದುರ್ಯೋಧನನ ಈ ಸಂಕೋಚವನ್ನು ಊಹಿಸಿ ಭೀಷ್ಮರೂ ಅದನ್ನನುಸರಿಸಿ ಉಳಿದ ಸೈನಿಕರೂ ಉತ್ತೇಜಕವಾಗಿ ಶಂಖಘೋಷವನ್ನು ಮಾಡುವರು. ವಾಂಡವರೂ ಇದಕ್ಕೆ ಪ್ರತಿಯಾಗಿ ಶಂಖಘೋಷದ ಉತ್ತರವನ್ನು ನೀಡುವರು. ತತಃ ಶ್ವೇತೈರ್ಷಯೈರ್ಯಕ್ತೇ ಮಹತಿ ಸ್ಕಂದನೇ ಸ್ಥಿತೌ | ಮಾಧವಃ ಪಾಂಡವಶ್ಚೆವ ದಿವ್ಯೌ ಶಂಖೌ ಪ್ರದದ್ಧತುಃ ॥ "ಬಿಳಿಯ ಕುದುರೆಗಳನ್ನು ಜೋಡಿಸಿದ ದಿವ್ಯರಥದಲ್ಲಿ ಕುಳಿತ ಕೃಷ್ಣಾರ್ಜುನರು ದಿವ್ಯಶಂಖಗಳನ್ನು ಊದಿದರು.'' ಈ ಪದ್ಯವು ಮುಂದಿನ ಘಟನೆಯನ್ನು ಸೂಚ್ಯವಾಗಿ ತಿಳಿಸುತ್ತದೆ. ನಾಲ್ಕು ವೇದಗಳಿಂದ ಕೂಡಿದ ಮಹಾಶಾಸ್ತ್ರದಲ್ಲಿ ಸಮಾವಿಷ್ಣರಾಗಿ ಕೃಷ್ಣಾರ್ಜುನರು ಓಂಕಾರ ನಾದವನ್ನು ಅರ್ಥಾತ್ ಶಾಂತಿಮಂತ್ರವನ್ನು ಹಾಡಿದರು-ಎಂದು ಮುಂದೆ ಅರ್ಜುನನಿಗೆ ಭಗವಂತನು ನೀಡಿರುವ ಉಪದೇಶದ ಸೂಚನೆಯನ್ನು ಇಲ್ಲಿ ಮಾಡಿದ್ದಾರೆ.
Source: Gitasaroddhara — pages/page-0019.txt p.19, lines 16-29; pages/page-0020.txt p.20, lines 3-28; pages/page-0021.txt p.21, lines 3-32; pages/page-0022.txt p.22, lines 3-5
ಅತ್ರ ಶೂರಾಃ ಮಹಾ ಇಷು ಆಸಾಃ ಭೀಮಾರ್ಜುನ ಸಮಾಃ ಯುಧಿ | ಯುಯುಧಾನಃ ವಿರಾಟಃ ಚ ದ್ರುಪದಃ ಚ ಮಹಾರಥಃ -- ಇಲ್ಲಿ ಎಲ್ಲರೂ ವೀರರು. ಹಿರಿಯ ಬಿಲ್ಲಾರರು. ಕಾದುವಲ್ಲಿ ಭೀಮಾರ್ಜುನರಿಗೆ ಸಾಟಿಯಾದವರು. ಸಾತ್ಯಕಿ, ವಿರಾಟ ಮತ್ತು ದ್ರುಪದ ಕೂಡಾ ಹಿರಿಯ ತೇರಾಳು. ಪಾಂಡವರ ಸೈನ್ಯವನ್ನು ನೋಡಿ ಮಾನಸಿಕವಾಗಿ ತಳಮಳಗೊಂಡ ದುರ್ಯೋಧನ, ದ್ರೋಣಾಚಾರ್ಯರ ಬಳಿ ಹೋಗಿ, ಪಾಂಡವ ಸೇನೆಯ ಬಗ್ಗೆ, ಅಲ್ಲಿರುವ ವೀರರ ಬಗ್ಗೆ ಮಾತನಾಡುತ್ತಾನೆ. ಸಾಮಾನ್ಯವಾಗಿ ನಮಗೆ ಯಾರ ಬಗ್ಗೆ ಭಯವಿದೆಯೋ, ಅವರೇ ಎಲ್ಲಾ ಕಡೆ ಕಂಡಂತೆ ಭಾಸವಾಗುತ್ತದೆ. ಕಂಸನಿಗೆ ಕೃಷ್ಣ ಕಾಣಿಸಿಕೊಂಡಂತೆ. ಇದು ಮನಃಶಾಸ್ತ್ರ. ಇಲ್ಲಿ ದುರ್ಯೋಧನನಿಗೆ ಭೀಮಾರ್ಜುನರ ಭಯ. ಆ ಭಯದಿಂದಲೇ ಹೇಳುತ್ತಾನೆ "ಅಲ್ಲಿರುವ ವೀರರೆಲ್ಲರೂ ಭೀಮಾರ್ಜುನರಿಗೆ ಸಮನಾದವರು. ಅಸಾಧಾರಣ ಬಿಲ್ಲನ್ನು ಹಿಡಿದು ಹೋರಾಡಿ ಗೆಲ್ಲಬಲ್ಲ ಮಹಾವೀರರು" ಎಂದು. ವಾಸ್ತವವಾಗಿ ಆಗಿನ ಕಾಲದಲ್ಲಿ ಇದ್ದ ಮಹಾಬಿಲ್ಲು ಎಂದರೆ ಗಾಂಢೀವ. ಗಾಂಢೀವ ಹಿಡಿದು ಯುದ್ಧ ಮಾಡಬಲ್ಲವರೆಂದರೆ ಅರ್ಜುನ-ಭೀಮ ಮತ್ತು ಶ್ರೀಕೃಷ್ಣ. ಈ ಸಂದರ್ಭದಲ್ಲಿ ದುರ್ಯೋಧನನಿಗೆ ಪಾಂಡವರ ಪಡೆಯಲ್ಲಿನ ಮಹಾವೀರರೆಲ್ಲರೂ ಭೀಮಾರ್ಜುನರಿಗೆ ಸಮನಾದ ಬಿಲ್ಲಾರರಾಗಿ ಕಾಣುತ್ತಾರೆ. ಇದು ದುರ್ಯೋಧನನ ಮನುಃಸ್ಥಿತಿಯನ್ನು ಹೇಳುತ್ತದೆ. ಮುಂದೆ ದುರ್ಯೋಧನ ಪಾಂಡವರ ಕಡೆಗಿನ ವೀರರ ಹೆಸರನ್ನು ಒಂದೊಂದಾಗಿ ಹೇಳಲಾರಂಭಿಸುತ್ತಾನೆ. “ಸಾತ್ಯಕಿ, ವಿರಾಟ, ದ್ರುಪದರಂತಹ ಮಹಾರಥರು ಪಾಂಡವ ಸೇನೆಯಲ್ಲಿದ್ದಾರೆ” ಎನ್ನುತ್ತಾನೆ. ಇಲ್ಲಿ ಈ ಮೂರು ಹೆಸರು ಬರಲು ವಿಶೇಷ ಕಾರಣವಿದೆ. ಈ ಮೂವರೂ ಕೂಡಾ ಕೌರವರ ಕಡೆಗೆ ಬರಬೇಕಾಗಿತ್ತು. ಜರಾಸಂಧನೊಡನಿದ್ದು, ಕೃಷ್ಣನ ವಿರುದ್ಧ ಹೋರಾಡಿದ ದ್ರುಪದನನ್ನು ಹಿಂದೆ ಪಾಂಡವರು ಬಂಧಿಸಿ, ಅವನ ಅರ್ಧರಾಜ್ಯವನ್ನು ಕಿತ್ತುಕೊಂಡು ದ್ರೋಣನಿಗೆ ಕೊಟ್ಟ ವಿಷಯ ಈ ಹಿಂದೆ ನೋಡಿದ್ದೇವೆ. ಆದರೆ ಪಾಂಡವರಿಗೆ ದ್ರೌಪದಿಯನ್ನು ಕೊಟ್ಟು ಸಂಬಂಧ ಬೆಳೆಸಿದ ದ್ರುಪದ-ಪಾಂಡವರ ಪರ ನಿಂತ. ವಿರಾಟ ಈ ಹಿಂದೆ ಕೀಚಕನಿಗೆ ಹೆದರಿಕೊಂಡು ರಾಜ್ಯಭಾರ ಮಾಡುತ್ತಿದ್ದ. ಕೀಚಕನನ್ನು ಭೀಮ ಕೊಂದಿದ್ದರಿಂದ ವಿರಾಟ ಪಾಂಡವರ ಪಾಳಯವನ್ನು ಸೇರಿಕೊಂಡ. ಇನ್ನು. ಬಲರಾಮನ ಆಣತಿಯನ್ನು ಮೀರದ ಸಾತ್ಯಕಿ. ಇಲ್ಲಿ ಬಲರಾಮ ಯುದ್ಧದಲ್ಲಿ ತಾನು ತಲೆ ಹಾಕುವುದಿಲ್ಲ. ಎಂದು ತೀರ್ಥಯಾತ್ರೆಗೆ ಹೊರಟು ಹೋಗಿರುವುದರಿಂದ ಸಾತ್ಯಕಿ ಕೂಡಾ ಪಾಂಡವರ ಪರ ನಿಂತ. ಹೀಗೆ ಈ ಪ್ರತಿಯೊಂದು ಹೆಸರನ್ನು ತೆಗೆದು ಹೇಳುತ್ತಿರುವ ದುರ್ಯೋಧನನಿಗೆ ಅಂತರಂಗದಲ್ಲಿ “ಅಯ್ಯೋ ನನ್ನ ಕಡೆ ಇರಬೇಕಾದ ಈ ಮಹಾರಥರು ಪಾಂಡವರ ಪಕ್ಷದಲ್ಲಿದ್ದಾರಲ್ಲ” ಎನ್ನುವ ನೋವಿದೆ. ಇದು ದುರ್ಯೋಧನನ ವಿಷಾದ! ಆತ ತನ್ನ ಯುದ್ಧತಂತ್ರವನ್ನು ರೂಪಿಸುವುದನ್ನು ಬಿಟ್ಟು, ಇಲ್ಲಿ ತನ್ನ ಕಡೆಗೆ ಬರಬೇಕಾಗಿದ್ದವರು ಪಾಂಡವರ ಕಡೆ ಸೇರಿದ್ದಾರಲ್ಲಾ ಎಂದು ವಿಷಾದಿಸುವುದರಲ್ಲಿ ಕಾಲಹರಣ ಮಾಡುತ್ತಿದ್ದಾನೆ. ಇನ್ನೂ ಅನೇಕ ವೀರರ ಹೆಸರನ್ನು ದುರ್ಯೋಧನ ಪಟ್ಟಿ ಮಾಡುತ್ತಾನೆ.
Source: Bhagavad Gita Pravachana — pages/page-0012.txt p.12, lines 27-35; pages/page-0013.txt p.13, lines 3-23
(4) ‘Here there are courageous warriors with mighty bows, the equals of Bhima and Arjuna in battle—Yuyudhana,8 Virata, Drupada and other great warriors.’9
Source: The Bhagavad Gita — structure/page-0036.json p.36, lines 1-1; pages/page-0037.txt p.37, lines 18-22
Reader discussion
No public reader discussion yet.