ತಸ್ಮಾತ್ ನ ಅರ್ಹಾ ವಯಮ್ ಹಂತುಮ್ ಧಾರ್ತರಾಷ್ಟ್ರಾನ್ ಸ್ವ ಬಾಂಧವಾನ್ |
ಸ್ವ ಜನಮ್ ಹಿ ಕಥಮ್ ಹತ್ವಾ ಸುಖಿನಃ ಸ್ಯಾಮ ಮಾಧವಾ-ಆದ್ದರಿಂದ ನಮ್ಮ ಅನುಬಂಧಿಗಳಾದ
ಧಾರ್ತರಾಷ್ಟ್ರರನ್ನು ನಾವು ಕೊಲ್ಲುವುದು ತರವಲ್ಲ. ನಮ್ಮ ಮಂದಿಯನ್ನು ಕೊಂದು ನಾವು ಹೇಗೆ
ಸುಖಿಗಳಾದೇವು ಮಾಧವಾ ?
ಧಾರ್ತರಾಷ್ಟ್ರರು ನಮ್ಮ ಸಹೋದರರು. ಅವರನ್ನು ಕೊಲ್ಲುವುದು ತರವಲ್ಲ. ನಮ್ಮ ಮಂದಿಯನ್ನೇ ನಾವು
ಕೊಂದು ಹೇಗೆ ನಾವು ಸುಖಿಗಳಾದೇವು? ಇದು ಅರ್ಜುನನ ಪ್ರಶ್ನೆ. ಸೂಕ್ಷ್ಮವಾಗಿ ಗಮನಿಸಿದಾಗ ಇಲ್ಲಿ ಅರ್ಜುನ
ತಾನು ಪ್ರಜಾಪಾಲಕ, ಧರ್ಮವನ್ನು ರಕ್ಷಿಸುವುದು ನನ್ನ ಕರ್ತವ್ಯ ಎನ್ನುವುದನ್ನು ಪೂರ್ಣ ಮರೆತು
ಮಾತನಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಇಲ್ಲಿ ಅರ್ಜುನ ಕೃಷ್ಣನನ್ನು 'ಮಾಧವ' ಎಂದು ಸಂಬೋಧಿಸುತ್ತಾನೆ. "ಮಾ' ಅಂದರೆ ಮಾತೆ ಲಕ್ಷ್ಮ. ಆದ್ದರಿಂದ
ಮಾಧವ ಅಂದರೆ ಲಕ್ಷ್ಮೀಪತಿ ಭಗವಂತ. ಇನ್ನು 'ಮಾ' ಅಂದರೆ ಜ್ಞಾನ ಕೂಡಾ ಹೌದು. ಭಗವಂತ ಜ್ಞಾನದ
ಒಡೆಯ, ಆದ್ದರಿಂದ ಆತ ಮಾಧವ. ಶ್ರೀಕೃಷ್ಣ ಮಧುವಂಶದಲ್ಲಿ ಹುಟ್ಟಿ ಬಂದದ್ದರಿಂದ ಆತನನ್ನು ಮಾಧವ ಎಂದೂ
ಕರೆಯುತ್ತಾರೆ. ವೇದದಲ್ಲಿ ಮಾತೃ ಎನ್ನುವ ಪದವನ್ನು ಮಾತು ಅಥವಾ ವಾಜ್ಮಯ ಎನ್ನುವ ಅರ್ಥದಲ್ಲಿ
ಉಪಯೋಗಿಸಿದ್ದಾರೆ. ಸಮಸ್ತ ವೈದಿಕ ವಾಜ್ಮಯ ಪ್ರತಿಪಾದ್ಯನಾದ ಭಗವಂತ ಮಾಧವ. ಅರ್ಜುನ
ಶ್ರೀಕೃಷ್ಣನನ್ನು ಈ ರೀತಿ ಸಂಬೋಧಿಸಲು ಕಾರಣವಿದೆ. ಕೃಷ್ಣ ಬರಿಯ ಸೋದರಮಾವನ ಮಗನಲ್ಲ,
ಇನ್ಯಾವುದೋ ಅತಿಮಾನುಷ ಶಕ್ತಿ ಎನ್ನುವ ಎಚ್ಚರ ಆತನಲ್ಲಿತ್ತು. ಆ ಕಾರಣದಿಂದ ಆತ ಒಂದೊಂದು ಕಡೆ
ಒಂದೊಂದು ರೀತಿ ಭಗವಂತನ ಆ ಅತಿಮಾನುಷ ಶಕ್ತಿಯನ್ನು ನೆನಪಿಸಿಕೊಂಡಿದ್ದಾನೆ. "ನೀನು ಈ ಜಗತ್ತಿನ
ಆದಿಶಕ್ತಿಯೆಂದು ನನಗೆ ತಿಳಿದಿದೆ. ಆದರೂ ಕೂಡಾ ಈ ಒಡಂಬಡಿಕೆಯಲ್ಲಿ ಏಕೆ ಮೂಕ ಪ್ರೇಕ್ಷಕನಾಗಿ
ಕುಳಿತಿದ್ದೀಯ”- ಎನ್ನುವುದು ಆತನ ಈ ಸಂಬೋಧನೆಯ ತಾತ್ಪರ್ಯ.
ಇದು ಎಷ್ಟು ವಿಚಿತ್ರ. ಭಗವಂತನ ಜೊತೆಗಿದ್ದು, ಕೃಷ್ಣನನ್ನು ಅತಿಮಾನುಷ ಶಕ್ತಿ ಎಂದು ತಿಳಿದ ಮಹಾಜ್ಞಾನಿ
ಅರ್ಜುನ, ಪ್ರತೀ ಕ್ಷಣದಲ್ಲಿ ಗೊಂದಲಕ್ಕೊಳಗಾಗುತ್ತಾನೆ. ಹೀಗಿರುವಾಗ ನಮ್ಮ ನಿಮ್ಮ ಪಾಡೇನು? ಇದು ವಿಚಿತ್ರ
ಮಾಯೆ. ಮಣ್ಣು ತಿಂದ ಶ್ರೀಕೃಷ್ಣನ ಬಾಯಿಯಲ್ಲಿ ಭಗವಂತನ ವಿಶ್ವರೂಪವನ್ನು ಕಂಡ ಮೇಲೂ ಯಶೋದೆ,
ಕೃಷ್ಣನನ್ನು ಶಿಕ್ಷೆಸಲು ಮುಂದಾಗುತ್ತಾಳೆ. ಇದು 'ನನ್ನ ಮಗು' ಎನ್ನುವ ಮಮತೆಯ ಮಾಯೆಯಲ್ಲಿರುತ್ತಾಳೆ. ಇಲ್ಲಿ
ಅರ್ಜುನನ ಸ್ಥಿತಿ ಕೂಡಾ ಇದೇ.
37. Therefore, we should not kill the sons of Dhritarashtra, our relatives; for, how can we be happy by killing our own people, O Madhava (Krishna)?
Source: Bhagavad Gita — pages/page-0032.txt p.32, lines 35-36; pages/page-0032.txt p.32, lines 38-39
ತಸ್ಮಾತ್ ನ ಅರ್ಹಾ ವಯಮ್ ಹಂತುಮ್ ಧಾರ್ತರಾಷ್ಟ್ರಾನ್ ಸ್ವ ಬಾಂಧವಾನ್ | ಸ್ವ ಜನಮ್ ಹಿ ಕಥಮ್ ಹತ್ವಾ ಸುಖಿನಃ ಸ್ಯಾಮ ಮಾಧವಾ-ಆದ್ದರಿಂದ ನಮ್ಮ ಅನುಬಂಧಿಗಳಾದ ಧಾರ್ತರಾಷ್ಟ್ರರನ್ನು ನಾವು ಕೊಲ್ಲುವುದು ತರವಲ್ಲ. ನಮ್ಮ ಮಂದಿಯನ್ನು ಕೊಂದು ನಾವು ಹೇಗೆ ಸುಖಿಗಳಾದೇವು ಮಾಧವಾ ? ಧಾರ್ತರಾಷ್ಟ್ರರು ನಮ್ಮ ಸಹೋದರರು. ಅವರನ್ನು ಕೊಲ್ಲುವುದು ತರವಲ್ಲ. ನಮ್ಮ ಮಂದಿಯನ್ನೇ ನಾವು ಕೊಂದು ಹೇಗೆ ನಾವು ಸುಖಿಗಳಾದೇವು? ಇದು ಅರ್ಜುನನ ಪ್ರಶ್ನೆ. ಸೂಕ್ಷ್ಮವಾಗಿ ಗಮನಿಸಿದಾಗ ಇಲ್ಲಿ ಅರ್ಜುನ ತಾನು ಪ್ರಜಾಪಾಲಕ, ಧರ್ಮವನ್ನು ರಕ್ಷಿಸುವುದು ನನ್ನ ಕರ್ತವ್ಯ ಎನ್ನುವುದನ್ನು ಪೂರ್ಣ ಮರೆತು ಮಾತನಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇಲ್ಲಿ ಅರ್ಜುನ ಕೃಷ್ಣನನ್ನು 'ಮಾಧವ' ಎಂದು ಸಂಬೋಧಿಸುತ್ತಾನೆ. "ಮಾ' ಅಂದರೆ ಮಾತೆ ಲಕ್ಷ್ಮ. ಆದ್ದರಿಂದ ಮಾಧವ ಅಂದರೆ ಲಕ್ಷ್ಮೀಪತಿ ಭಗವಂತ. ಇನ್ನು 'ಮಾ' ಅಂದರೆ ಜ್ಞಾನ ಕೂಡಾ ಹೌದು. ಭಗವಂತ ಜ್ಞಾನದ ಒಡೆಯ, ಆದ್ದರಿಂದ ಆತ ಮಾಧವ. ಶ್ರೀಕೃಷ್ಣ ಮಧುವಂಶದಲ್ಲಿ ಹುಟ್ಟಿ ಬಂದದ್ದರಿಂದ ಆತನನ್ನು ಮಾಧವ ಎಂದೂ ಕರೆಯುತ್ತಾರೆ. ವೇದದಲ್ಲಿ ಮಾತೃ ಎನ್ನುವ ಪದವನ್ನು ಮಾತು ಅಥವಾ ವಾಜ್ಮಯ ಎನ್ನುವ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಸಮಸ್ತ ವೈದಿಕ ವಾಜ್ಮಯ ಪ್ರತಿಪಾದ್ಯನಾದ ಭಗವಂತ ಮಾಧವ. ಅರ್ಜುನ ಶ್ರೀಕೃಷ್ಣನನ್ನು ಈ ರೀತಿ ಸಂಬೋಧಿಸಲು ಕಾರಣವಿದೆ. ಕೃಷ್ಣ ಬರಿಯ ಸೋದರಮಾವನ ಮಗನಲ್ಲ, ಇನ್ಯಾವುದೋ ಅತಿಮಾನುಷ ಶಕ್ತಿ ಎನ್ನುವ ಎಚ್ಚರ ಆತನಲ್ಲಿತ್ತು. ಆ ಕಾರಣದಿಂದ ಆತ ಒಂದೊಂದು ಕಡೆ ಒಂದೊಂದು ರೀತಿ ಭಗವಂತನ ಆ ಅತಿಮಾನುಷ ಶಕ್ತಿಯನ್ನು ನೆನಪಿಸಿಕೊಂಡಿದ್ದಾನೆ. "ನೀನು ಈ ಜಗತ್ತಿನ ಆದಿಶಕ್ತಿಯೆಂದು ನನಗೆ ತಿಳಿದಿದೆ. ಆದರೂ ಕೂಡಾ ಈ ಒಡಂಬಡಿಕೆಯಲ್ಲಿ ಏಕೆ ಮೂಕ ಪ್ರೇಕ್ಷಕನಾಗಿ ಕುಳಿತಿದ್ದೀಯ”- ಎನ್ನುವುದು ಆತನ ಈ ಸಂಬೋಧನೆಯ ತಾತ್ಪರ್ಯ. ಇದು ಎಷ್ಟು ವಿಚಿತ್ರ. ಭಗವಂತನ ಜೊತೆಗಿದ್ದು, ಕೃಷ್ಣನನ್ನು ಅತಿಮಾನುಷ ಶಕ್ತಿ ಎಂದು ತಿಳಿದ ಮಹಾಜ್ಞಾನಿ ಅರ್ಜುನ, ಪ್ರತೀ ಕ್ಷಣದಲ್ಲಿ ಗೊಂದಲಕ್ಕೊಳಗಾಗುತ್ತಾನೆ. ಹೀಗಿರುವಾಗ ನಮ್ಮ ನಿಮ್ಮ ಪಾಡೇನು? ಇದು ವಿಚಿತ್ರ ಮಾಯೆ. ಮಣ್ಣು ತಿಂದ ಶ್ರೀಕೃಷ್ಣನ ಬಾಯಿಯಲ್ಲಿ ಭಗವಂತನ ವಿಶ್ವರೂಪವನ್ನು ಕಂಡ ಮೇಲೂ ಯಶೋದೆ, ಕೃಷ್ಣನನ್ನು ಶಿಕ್ಷೆಸಲು ಮುಂದಾಗುತ್ತಾಳೆ. ಇದು 'ನನ್ನ ಮಗು' ಎನ್ನುವ ಮಮತೆಯ ಮಾಯೆಯಲ್ಲಿರುತ್ತಾಳೆ. ಇಲ್ಲಿ ಅರ್ಜುನನ ಸ್ಥಿತಿ ಕೂಡಾ ಇದೇ.
Source: Bhagavad Gita Pravachana — pages/page-0033.txt p.33, lines 25-31; pages/page-0034.txt p.34, lines 3-23
(37) ‘Therefore, we cannot kill the sons of Dhritarashtra, with their friends. O Madhava! How can we be happy after killing our relatives?’
Source: The Bhagavad Gita — structure/page-0050.json p.50, lines 1-1; pages/page-0051.txt p.51, lines 1-4
Reader discussion
No public reader discussion yet.