21-22. In the middle of the two armies, place my chariot, O Krishna, so that I may behold
those who stand here, desirous to fight, and know with whom I must fight when the battle begins.
ಸೇನಯೋರುಭಯೋರ್ಮಧ್ಯೇ
ಹೀಗೆ ಎರಡು ಸೇನೆಗಳೂ ಯುದ್ಧ ಸನ್ನದ್ಧವಾಗಿರುವುದನ್ನು ಕಂಡು
ಅರ್ಜುನನು ಸಮರೋತ್ಸುಕನಾಗಿ ಎರಡೂ ಸೇನೆಗಳ ಮಧ್ಯದಲ್ಲಿ ತನ್ನ ರಥವನ್ನು
ನಿಲ್ಲಿಸಬೇಕೆಂದೂ ತಾನು ಯಾರ ಜೊತೆಗೆ ಯುದ್ಧ ಮಾಡಬೇಕಾಗಿದೆಯೋ
ಅವರನ್ನೆಲ್ಲಾ ವಿಹಂಗಮ ದೃಷ್ಟಿಯಿಂದ ನೋಡಬೇಕೆಂದಿರುವೆನೆಂದೂ ತನ್ನ
ಸಾರಥಿಯಾದ ಶ್ರೀಕೃಷ್ಣ ಪರಮಾತ್ಮನನ್ನು ಕೇಳುತ್ತಾನೆ. ಅದರಂತೆ ಶ್ರೀಕೃಷ್ಣನು
ಎರಡೂ ಸೇನೆಗಳ ಮಧ್ಯದಲ್ಲಿ ರಥವನ್ನು ನಿಲ್ಲಿಸಿದಾಗ ಅರ್ಜುನನು ಸೈನ್ಯವನ್ನು
ವೀಕ್ಷಿಸುವನು. ಒಮ್ಮೆಲೇ ಅವನ ಹೃದಯಕ್ಕೆ ಆಘಾತವಾದಂತಾಗುತ್ತದೆ. ತಮ್ಮ
ಎದುರಿನಸೈನ್ಯದಲ್ಲಿರುವಎಲ್ಲಮುಖಗಳೂ ಚಿರಪರಿಚಿತಗಳೇ. ಆಚಾರ್ಯರು,
ಬಂಧುಗಳು, ಸ್ನೇಹಿತರು ಇಂತಹವರೇ ಯುದ್ಧಕ್ಕಾಗಿ ಎದುರು ಬಂದು
ನಿಂತಿದ್ದಾರೆ. ತಾನು ಈವರೆಗೆ ಪ್ರೀತಿಸುತ್ತಿದ್ದ ವ್ಯಕ್ತಿಗಳ ಜೊತೆಯಲ್ಲಿ ನಿಷ್ಠುರವಾದ
ಯುದ್ಧವನ್ನು ನಡೆಸಬೇಕಾದ ಸನ್ನಿವೇಶವನ್ನು ನೆನೆದು ಅರ್ಜುನನ ಹೃದಯವು
ಉದ್ವಿಗ್ನವಾಗುತ್ತದೆ. ಅರ್ಜುನನು ಮೋಹಪರವರನಾಗುತ್ತಾನೆ. ಬಂಧು
ವ್ಯಾಮೋಹದಿಂದ ಅವನ ಸರ್ವಶಕ್ತಿಯೂಕುಂಠಿತವಾದಂತೆನಿಸುತ್ತದೆ. ತಾನು ಈ
ಸ್ವಜನರ ಜೊತೆಗೆ ಯುದ್ಧವನ್ನು ನಡೆಸುವುದಿಲ್ಲವೆಂದು ಕೃಷ್ಣನಲ್ಲಿ ನಿವೇದಿಸಿ ತನ್ನ
ಈ ನಿರ್ಧಾರಕ್ಕೆ ಬಲವಾದ ಕಾರಣಗಳನ್ನು ನಿರೂಪಿಸುತ್ತಾನೆ. ಅರ್ಜುನನ
ನಿರೂಪಣೆಯು ಸಂಕ್ಷೇಪವಾಗಿ ಈ ರೀತಿ ಇದೆ.
"ನಾನು ಮಾಡಬೇಕೆಂದಿರುವ ಈ ಯುದ್ಧದಿಂದ ಐಹಿಕ ಪ್ರಯೋಜನವೂ
ಇಲ್ಲ; ಪಾರತ್ರಿಕ ಲಾಭವೂಇಲ್ಲ, ಯುದ್ಧದಲ್ಲಿ ಗೆದ್ದರೆ ರಾಜ್ಯಸುಖಭೋಗಗಳು
ದೊರೆಯಬಹುದು. ಆದರೆ ನಾವು, ದೊರೆಯುವುದಕ್ಕಿಂತ ಹೆಚ್ಚಿನದನ್ನು
ಕಳೆದುಕೊಳ್ಳುತ್ತೇವೆ ನಮ್ಮ ಎಲ್ಲ ಗುರು, ಬಂಧು, ಸ್ನೇಹಿತರ ಪರಿವಾರವನ್ನು
ಕಳೆದುಕೊಂಡು ಅವರ ಸಮಾಧಿಯ ಮೇಲೆ ಕಟ್ಟುವಸುಖಛೋಗದ ಸೌಧವು
ನಮಗೆ ಏನು ಆನಂದವನ್ನು ನೀಡಬಲ್ಲದು? ನಾವು ವಿಜಯಿಗಳಾಗಿ
ರಾಜ್ಯಾಧಿಕಾರಿಗಳಾದ ನಂತರ ಭೋಗ ಪದಾರ್ಥಗಳಿಗೂ ನಮ್ಮ ಶರೀರ
ಮನಸ್ಸುಗಳಿಗೂ ಸಂಬಂಧವೇನೋ ಆಗಬಹುದು. ಆದರೆ ಅದರಿಂದ
ಆನಂದವು ಮಾತ್ರ ದೊರೆಯಲಾರದು. ಹುರಿದ ಬೀಜಗಳನ್ನು ನೆಲದಲ್ಲಿ
ಹಾಕಿದರೂ ಅದರಿಂದ ಮೊಳಕೆ ಬರಲಾರದು. ಅದರಂತೆ ನಮ್ಮ ಪ್ರೀತಿಪಾತ್ರ
ಪರಿವಾರದ ನಿಧನದ ಶೋಕದಿಂದ ಹುರಿದ, ಬೆಂದ, ಈ ಹೃದಯವು ಯಾವ
ಅನಂದದ ರುರಿಯನ್ನೂ ಆಸ್ವಾದಿಸಲಾರದು. ಬಂಧು ಜನರ ರಕ್ತಸಿಕ್ತವಾದ ಈ
ರಾಜ್ಯವನ್ನಾ ಗಲಿ, ಭೋಗಜೀವಿತಗಳನ್ನ ಗಲಿನಾನು ಬಯಸಲಾರೆ.
"'ಇನ್ನುವಾರತ್ರಿಕಸುಖ, ಅದಾದರೂ ಈನಿರ್ದಯಕಾರ್ಯದಿಂದನವಗೆ
ಹೇಗೆ ದೊರೆಯುವುದು? ಧೃತರಾಷ್ಟ್ರನ ಮಕ್ಕಳೇನೋನವಗೆ ಆತತಾಯಿಗಳು.*
ಆದರೆ ನಾವು ಅವರ ಜೊತೆಗೆ ಮಾತ್ರ ಯುದ್ಧಮಾಡುತ್ತಿರುವುದಲ್ಲ. ಶತ್ರುಗಳ
ಜೊತೆ ಅನೇಕ ಬಂಧು, ಮಿತ್ರ, ಗುರುಗಳನ್ನು ನಾವು ಯುದ್ಧದಲ್ಲಿ ಎದುರಿಸಿ
ಕೊಲ್ಲಬೇಕಾಗುವುದು. ಹೀಗೆ ಗುರುಗಳನ್ನು ಬಂಧು-ಮಿತ್ರರನ್ನು
ಕೊಲ್ಲುವುದರಿಂದ ನಾವೇ ಆತತಾಯಿಗಳಾಗಿ ಸ್ವರ್ಗದಿಂದಲೂ ಪಾರತ್ರಿಕ
ಸುಖದಿಂದಲೂ ವಂಚಿತರಾಗುವೆವು. ದುರ್ಯೋಧನಾದಿಗಳು ಆತತಾಯಿ
ಗಳೂ ದುಷ್ಟರೂ ಎಂದು ಭಾವಿಸಿ ಅವರನ್ನು ನಾಶಪಡಿಸಲು ಹೋಗಿ ನಾವು
ಅದೇ ದೌಷ್ಟ್ಯವನ್ನೂ ಅಕೃತ್ಯವನ್ನೂ ಎಸಗುವುದೇ? ಪರಲೋಕದಲ್ಲಿ ಇಬ್ಬರೂ
ಕೂಡಿ ನರಕವನ್ನು ಅನುಭವಿಸಬೇಕಾಗುವುದು.''
ಹೀಗೆ ಯುದ್ಧದಿಂದ ಐಹಿಕ ಹಾಗೂ ಪಾರತ್ರಿಕ ಇವೆರಡೂ ಸುಖ
ಇಲ್ಲವೆಂದು ಅರ್ಜುನನು ಪ್ರತಿಪಾದಿಸುತ್ತಿದ್ದಾನೆ. ಇಷ್ಟೇ ಅಲ್ಲದೆ, ಯುದ್ಧದಿಂದ
ಲೋಕವ್ಯವಸ್ಥೆಯು ಬುಡಮೇಲಾಗಿ ಅದರಿಂದ ಆಗಬಹುದಾದ ಅನರ್ಥಗಳಿಗೆ
ತಾನು ಹೊಣೆಗಾರನಾಗುವೆನೆಂಬ ಆಶಂಕೆಯನ್ನೂ | ಅರ್ಜುನನು
ವ್ಯಕ್ತಪಡಿಸುತ್ತಾನೆ. ""ಯುದ್ಧದಿಂದ ದೊಡ್ಡ ಪ್ರಮಾಣದಲ್ಲಿ ಕುಲನಾಶವಾಗು
ತ್ತದೆ. ಕುರುಕ್ಷೇತ್ರದಲ್ಲಿ ಪ್ರತಿ ಮನೆಯಿಂದ ಎಂಬಂತೆ ವಿಶೇಷ ಪ್ರಮಾಣದಲ್ಲಿ
ತೀ ಆತತಾಯಿ:: ವಿಷ್ಯ ಬೆಂಕಿಮುಂತಾದ ಮಾರ್ಗಗಳಿಂದಕೊಲ್ಲಲು ಪ್ರಯತ್ನಿಸುವವನು
ಆತತಾಯಿ. ಆತ್ಮರಕ್ಷಣೆಗಾಗಿ ಇಂತಹವನನ್ನು ಕೊಲ್ಲಬೇಕೆಂದು ಶಾಸ್ತ್ರವಚನವಿದೆ.
ಸೈನಿಕರ ಜಮಾವಣೆಯಾಗಿದೆ. ಇವರೆಲ್ಲರನಾಶದಿಂದ ಪುರುಷಸಂಖ್ಯೆಯ ಹಾನಿ
ಅಪಾರವಾಗುವುದು. ನಿರುವಾಯರಾಗಿ ಸ್ತ್ರೀಯರು ತಪ್ಪುದಾರಿ ತುಳಿಯಲು
ಅವಕಾಶವಾಗುವುದು. ವರ್ಣಸಂಕರವಾಗಬಹುದು. ಲೋಕವ್ಯವಸ್ಥೆಯು
ಅಸ್ಪವ್ಯಸ್ತವಾಗಬಹುದು. ಅನೀತಿ ಅನಾಚಾರಗಳ ತಾಂಡವವಾಗಬಹುದು''
-ಎಂಬುದೇ ಅರ್ಜುನನ ಆಶಂಕೆ. ದ್ವಿತೀಯ ಮಹಾ ಯುದ್ಧದ ನಂತರದ ಕೆಲವು
ಸಂಗತಿಗಳನ್ನು ನೋಡಿದರೆ ಅರ್ಜುನನ ಈ ಆಶಂಕೆಗೂ ಆಧಾರವಿದೆ ಎಂದು
ನಮಗೆ ಅನಿಸಬಹುದು.
ಹೀಗೆ ವೈಯಕ್ತಿಕವಾಗಿ ಐಹಿಕ ಪಾರತ್ರಿಕ ಸುಖಗಳಿಗೆ ವಿಘಾತಕವೂ
ಹಾನಿಕಾರಕವೂ ವ್ಯವಸ್ಥಾಹಾನಿಯಿಂದ ಸಮಾಜಘಾತಕವೂ ಆದ ಈ
ಯುದ್ಧದಲ್ಲಿ ತಾನು ತೊಡಗುವುದಿಲ್ಲವೆಂದು ಅರ್ಜುನನು ಪಟ್ಟುಹಿಡಿಯು
ತ್ತಾನೆ. ತಾನು ಭಿಕ್ಷೆಬೇಡಿಯಾದರೂ ಜೀವಿಸಬಲ್ಲೆ; ಅಥವಾ ವಾನಪ್ರಸ್ಥನಾಗಿ
ಅರಣ್ಯಕ್ಯೂಹೋಗಬಲ್ಲೆ ಬಂಧುಹತ್ಯೆಯಂತಹ ನಿರ್ದಯ ಕಾರ್ಯವನ್ನು ರಾಜ್ಯದ
ಆತೆಗಾಗಿ ಮಾಡಲಾರೆನೆಂದು ತೀವ್ರ ಮಾನಸಿಕ ಉದ್ವೇಗಕ್ಕೆ ಒಳಗಾದ
ಅರ್ಜುನನು ಬಲವಾಗಿ ಪ್ರತಿಪಾದಿಸಿ ಶಸ್ತ್ರವನ್ನು ಕೆಳಗಿಡುವನು. ಶ್ರೀಕೃಷ್ಣನು
'್ಲೀಬವೃತ್ತಿಯನ್ನು ಅನುಸರಿಸದಿರು. ಹೃದಯದೌರ್ಬಲ್ಯವನ್ನು ಕಿತ್ತೊಗೆದು
ವೀರನಾಗಿ ಎದ್ದೇಳು.'' ಎಂದು ಬೋಧಿಸಿದರೂ ಅರ್ಜುನನ ಚಿತ್ತವೃತ್ತಿಯಲ್ಲಿ
ಏನೂ ಬದಲಾವಣೆ ಆಗುವುದಿಲ್ಲ. ಬಂಧುಹತ್ಯೆಯಿಂದ ದೊರಕಬಹುದಾದ
ಇಡೀ ಭೂಲೋಕದ ಅಧಿವತ್ಯವನ್ನಾಗಲಿ ಸ್ವರ್ಗರಾಜ್ಯವನ್ನಾಗಲಿ ತಾನು
ಬಯಸಲಾರೆನೆಂದು ವ್ಯಾಮೋಹದ ಪರಾಕಾಷ್ಠೆಯಿಂದ ವ್ಯವಹರಿಸುತ್ತಾನೆ.
ಪಾರತ್ರಿಕ ಸುಖದೊರೆತರೂ ತಾನು ಬಂಧುಗಳನ್ನು ಹಿಂಸಿನಲಾರೆನೆಂದು ಹಠ
ಹಿಡಿಯುತ್ತಾನೆ. ವಿಕ್ಸಿವಚಿತ್ತನಾಗಿ ಶ್ರೀಕೃಷ್ಣನನ್ನು ಪ್ರಾರ್ಥಿಸಿಕೊಳ್ಳುತ್ತ ತಾನು
ಕರ್ತವ್ಯಮೂಢನಾಗಿರುವೆನು. ಮೋಹವಶನಾಗಿ ಸತ್ಯವನ್ನು ತಿಳಿಯಲು
ಅಸಮರ್ಥನಿರುವೆನು. ಧರ್ಮಸಮ್ಮೂಢಚೇತನಾದ ತನಗೆ ಸರಿಯಾದ
ದಾರಿಯನ್ನು ತೋರಿಸಿ ಗುರುವಾಗಿ ನೀನು ಉದ್ದರಿಸಬೇಕೆಂದು ಬೇಡುವನು.
ಇಷ್ಟೆಲ್ಲ ವಾದಗಳನ್ನು ಮುಂದಿಟ್ಟು ಯುದ್ಧವನ್ನು ಅರ್ಜುನನು
ವಿರೋಧಿಸಿದರೂ ತನ್ನ ವಾದದಲ್ಲಿ ಆತನಿಗೆ ನಂಬಿಕೆ ಇರಲಿಲ್ಲ. ತಾನು
ಮೋಹ-ಕಾರ್ಪಣ್ಯಗಳಿಗೆ ಒಳಪಟ್ಟು ಅವನ್ನು ವೇದಾಂತಿಕ ಭಾಷೆಯಿಂದ
ಮುಚ್ಚಿಡಲು ಪ್ರಯತ್ನಿಸುತ್ತಿದ್ದೇನೆಂದು ಅರ್ಜುನನಿಗೂ ಅರಿವಾಗಿತ್ತು.
ಬಂಧುವ್ಯಾಮೋಹ, ಧರ್ಮಭೀರುತ್ವ ಒಂದೆಡೆ. ಕರ್ತವ್ಯದ ಕರೆ ಇನ್ನೊಂದೆಡೆ,
ಈ ಅಂತರ್ದ್ವಂದ್ವದಲ್ಲಿ ಸಿಲುಕಿದ ಅರ್ಜುನನಿಗೆ ನಿಶ್ಚಿತ ಪಥವು ಗೋಚರ
ವಾಗದೆ, ಗುರುವಾಗಿ ತನಗೆ ಮಾರ್ಗದರ್ಶನ ಮಾಡಿ ಉದ್ಭರಿಸಬೇಕೆಂದು
ಶ್ರೀಕೃಷ್ಣಪರಮಾತ್ಮನಲ್ಲಿ ಶರಣಾಗತನಾಗುವನು.
ಅರ್ಜುನಃ ಉವಾಚ- ಅರ್ಜುನನು ನುಡಿದನು
ಸೇನಯೋಃ ಉಭಯೋಃ ಮಧ್ಯೇ ರಥಮ್ ಸ್ಥಾಪಯ ಮೇ ಅಚ್ಯುತ -- 'ಅಳಿವಿರದ ಕೃಷ್ಣನೇ' ಎರಡು ಪಡೆಗಳ
ನಡುವೆ ನನ್ನ ರಥವನ್ನು ನಿಲ್ಲಿಸು.
ಈ ಶ್ಲೋಕದಲ್ಲಿ ನಾವು ಸೂಕ್ಷ್ಮವಾಗಿ ಅರ್ಜುನನ ಅಹಂಕಾರದ ಧ್ವನಿಯನ್ನು ಗಮನಿಸಬೇಕು. we’ ಅಂದರೆ
ನನ್ನ'. ಅರ್ಜುನನ ರಥದ ಸಾರಥ್ಯವನ್ನು ಸ್ವಯಂ ಶ್ರೀಕೃಷ್ಣ ವಹಿಸಿದ್ದರೂ ಕೂಡಾ, ಇಲ್ಲಿ ಅಹಂಕಾರದಲ್ಲಿ ಆತ
ಕೃಷ್ಣನನ್ನು ಸಾಮಾನ್ಯ ಸಾರಥಿಯಂತೆ ಮಾತನಾಡಿಸಿ, " ನನ್ನ ರಥವನ್ನು ಎರಡೂ ಸೈನ್ಯಗಳ ಮಧ್ಯದಲ್ಲಿ ನಿಲ್ಲಿಸು
ಎಂದು ಆಜ್ಞೆ ಮಾಡುವ ಧ್ವನಿಯಲ್ಲಿ ಹೇಳುತ್ತಾನೆ.
ಇಲ್ಲಿ ಅರ್ಜುನ ಶ್ರೀಕೃಷ್ಣನನ್ನು ಅಚ್ಯುತ ಎಂದು ಸಂಬೋಧಿಸಿದ್ದಾನೆ. ಅಚ್ಯುತ ಎಂದರೆ ಸ್ವಯಂ ಚ್ಯುತಿ ಇಲ್ಲದ,
ಭಕ್ತರ ಚ್ಯುತಿಯನ್ನು ಹರಣ ಮಾಡುವ ಭಗವಂತ. ಬಾಹ್ಯವಾಗಿ ಅಹಂಕಾರ ತೋರಿದರೂ ಕೂಡಾ, ಅರ್ಜುನನ
ಅಂತರಾತ್ಮ ಮಾತ್ರ ಎಚ್ಚರದಿಂದಿತ್ತು, ಆ ಅಂತರಾತ್ಮ ಆತನ ಬಾಯಲ್ಲಿ ಈ ನಾಮವನ್ನು ನುಡಿಸಿದೆ. ಅಹಂಕಾರ
ಎಂತಹ ಮಹಾತ್ಮರನ್ನೂ ಬಿಟ್ಟಿಲ್ಲ. ಒಮ್ಮೆ ನಮ್ಮ ಕೈಯಲ್ಲಿ ಬಲವಿದೆ ಎಂದು ತಿಳಿದಾಗ ನಾವು ಎಲ್ಲವನ್ನೂ
ಮರೆತು ಅಹಂಕಾರದ ದಾಸರಾಗುತ್ತೇವೆ. ಈ ಅಹಂಕಾರ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ. ಅರ್ಜುನ
ಮಹಾಜ್ಞಾನಿ ಮತ್ತು ಶ್ರೀಕೃಷ್ಣನ ಭಕ್ತ. ತನ್ನ ಭಕ್ತ ಅಹಂಕಾರಕ್ಕೊಳಪಟ್ಟಾಗ, ಶ್ರೀಕೃಷ್ಣ ಯಾವ ರೀತಿ ಪ್ರತಿಕ್ರಿಯೆ
ತೋರುತ್ತಾನೆ ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.
Shared across BG 1.21–1.22
21-22. In the middle of the two armies, place my chariot, O Krishna, so that I may behold those who stand here, desirous to fight, and know with whom I must fight when the battle begins.
Source: Bhagavad Gita — pages/page-0030.txt p.30, lines 30-33; pages/page-0030.txt p.30, lines 37-38
ಸೇನಯೋರುಭಯೋರ್ಮಧ್ಯೇ ಹೀಗೆ ಎರಡು ಸೇನೆಗಳೂ ಯುದ್ಧ ಸನ್ನದ್ಧವಾಗಿರುವುದನ್ನು ಕಂಡು ಅರ್ಜುನನು ಸಮರೋತ್ಸುಕನಾಗಿ ಎರಡೂ ಸೇನೆಗಳ ಮಧ್ಯದಲ್ಲಿ ತನ್ನ ರಥವನ್ನು ನಿಲ್ಲಿಸಬೇಕೆಂದೂ ತಾನು ಯಾರ ಜೊತೆಗೆ ಯುದ್ಧ ಮಾಡಬೇಕಾಗಿದೆಯೋ ಅವರನ್ನೆಲ್ಲಾ ವಿಹಂಗಮ ದೃಷ್ಟಿಯಿಂದ ನೋಡಬೇಕೆಂದಿರುವೆನೆಂದೂ ತನ್ನ ಸಾರಥಿಯಾದ ಶ್ರೀಕೃಷ್ಣ ಪರಮಾತ್ಮನನ್ನು ಕೇಳುತ್ತಾನೆ. ಅದರಂತೆ ಶ್ರೀಕೃಷ್ಣನು ಎರಡೂ ಸೇನೆಗಳ ಮಧ್ಯದಲ್ಲಿ ರಥವನ್ನು ನಿಲ್ಲಿಸಿದಾಗ ಅರ್ಜುನನು ಸೈನ್ಯವನ್ನು ವೀಕ್ಷಿಸುವನು. ಒಮ್ಮೆಲೇ ಅವನ ಹೃದಯಕ್ಕೆ ಆಘಾತವಾದಂತಾಗುತ್ತದೆ. ತಮ್ಮ ಎದುರಿನಸೈನ್ಯದಲ್ಲಿರುವಎಲ್ಲಮುಖಗಳೂ ಚಿರಪರಿಚಿತಗಳೇ. ಆಚಾರ್ಯರು, ಬಂಧುಗಳು, ಸ್ನೇಹಿತರು ಇಂತಹವರೇ ಯುದ್ಧಕ್ಕಾಗಿ ಎದುರು ಬಂದು ನಿಂತಿದ್ದಾರೆ. ತಾನು ಈವರೆಗೆ ಪ್ರೀತಿಸುತ್ತಿದ್ದ ವ್ಯಕ್ತಿಗಳ ಜೊತೆಯಲ್ಲಿ ನಿಷ್ಠುರವಾದ ಯುದ್ಧವನ್ನು ನಡೆಸಬೇಕಾದ ಸನ್ನಿವೇಶವನ್ನು ನೆನೆದು ಅರ್ಜುನನ ಹೃದಯವು ಉದ್ವಿಗ್ನವಾಗುತ್ತದೆ. ಅರ್ಜುನನು ಮೋಹಪರವರನಾಗುತ್ತಾನೆ. ಬಂಧು ವ್ಯಾಮೋಹದಿಂದ ಅವನ ಸರ್ವಶಕ್ತಿಯೂಕುಂಠಿತವಾದಂತೆನಿಸುತ್ತದೆ. ತಾನು ಈ ಸ್ವಜನರ ಜೊತೆಗೆ ಯುದ್ಧವನ್ನು ನಡೆಸುವುದಿಲ್ಲವೆಂದು ಕೃಷ್ಣನಲ್ಲಿ ನಿವೇದಿಸಿ ತನ್ನ ಈ ನಿರ್ಧಾರಕ್ಕೆ ಬಲವಾದ ಕಾರಣಗಳನ್ನು ನಿರೂಪಿಸುತ್ತಾನೆ. ಅರ್ಜುನನ ನಿರೂಪಣೆಯು ಸಂಕ್ಷೇಪವಾಗಿ ಈ ರೀತಿ ಇದೆ. "ನಾನು ಮಾಡಬೇಕೆಂದಿರುವ ಈ ಯುದ್ಧದಿಂದ ಐಹಿಕ ಪ್ರಯೋಜನವೂ ಇಲ್ಲ; ಪಾರತ್ರಿಕ ಲಾಭವೂಇಲ್ಲ, ಯುದ್ಧದಲ್ಲಿ ಗೆದ್ದರೆ ರಾಜ್ಯಸುಖಭೋಗಗಳು ದೊರೆಯಬಹುದು. ಆದರೆ ನಾವು, ದೊರೆಯುವುದಕ್ಕಿಂತ ಹೆಚ್ಚಿನದನ್ನು ಕಳೆದುಕೊಳ್ಳುತ್ತೇವೆ ನಮ್ಮ ಎಲ್ಲ ಗುರು, ಬಂಧು, ಸ್ನೇಹಿತರ ಪರಿವಾರವನ್ನು ಕಳೆದುಕೊಂಡು ಅವರ ಸಮಾಧಿಯ ಮೇಲೆ ಕಟ್ಟುವಸುಖಛೋಗದ ಸೌಧವು ನಮಗೆ ಏನು ಆನಂದವನ್ನು ನೀಡಬಲ್ಲದು? ನಾವು ವಿಜಯಿಗಳಾಗಿ ರಾಜ್ಯಾಧಿಕಾರಿಗಳಾದ ನಂತರ ಭೋಗ ಪದಾರ್ಥಗಳಿಗೂ ನಮ್ಮ ಶರೀರ ಮನಸ್ಸುಗಳಿಗೂ ಸಂಬಂಧವೇನೋ ಆಗಬಹುದು. ಆದರೆ ಅದರಿಂದ ಆನಂದವು ಮಾತ್ರ ದೊರೆಯಲಾರದು. ಹುರಿದ ಬೀಜಗಳನ್ನು ನೆಲದಲ್ಲಿ ಹಾಕಿದರೂ ಅದರಿಂದ ಮೊಳಕೆ ಬರಲಾರದು. ಅದರಂತೆ ನಮ್ಮ ಪ್ರೀತಿಪಾತ್ರ ಪರಿವಾರದ ನಿಧನದ ಶೋಕದಿಂದ ಹುರಿದ, ಬೆಂದ, ಈ ಹೃದಯವು ಯಾವ ಅನಂದದ ರುರಿಯನ್ನೂ ಆಸ್ವಾದಿಸಲಾರದು. ಬಂಧು ಜನರ ರಕ್ತಸಿಕ್ತವಾದ ಈ ರಾಜ್ಯವನ್ನಾ ಗಲಿ, ಭೋಗಜೀವಿತಗಳನ್ನ ಗಲಿನಾನು ಬಯಸಲಾರೆ. "'ಇನ್ನುವಾರತ್ರಿಕಸುಖ, ಅದಾದರೂ ಈನಿರ್ದಯಕಾರ್ಯದಿಂದನವಗೆ ಹೇಗೆ ದೊರೆಯುವುದು? ಧೃತರಾಷ್ಟ್ರನ ಮಕ್ಕಳೇನೋನವಗೆ ಆತತಾಯಿಗಳು.* ಆದರೆ ನಾವು ಅವರ ಜೊತೆಗೆ ಮಾತ್ರ ಯುದ್ಧಮಾಡುತ್ತಿರುವುದಲ್ಲ. ಶತ್ರುಗಳ ಜೊತೆ ಅನೇಕ ಬಂಧು, ಮಿತ್ರ, ಗುರುಗಳನ್ನು ನಾವು ಯುದ್ಧದಲ್ಲಿ ಎದುರಿಸಿ ಕೊಲ್ಲಬೇಕಾಗುವುದು. ಹೀಗೆ ಗುರುಗಳನ್ನು ಬಂಧು-ಮಿತ್ರರನ್ನು ಕೊಲ್ಲುವುದರಿಂದ ನಾವೇ ಆತತಾಯಿಗಳಾಗಿ ಸ್ವರ್ಗದಿಂದಲೂ ಪಾರತ್ರಿಕ ಸುಖದಿಂದಲೂ ವಂಚಿತರಾಗುವೆವು. ದುರ್ಯೋಧನಾದಿಗಳು ಆತತಾಯಿ ಗಳೂ ದುಷ್ಟರೂ ಎಂದು ಭಾವಿಸಿ ಅವರನ್ನು ನಾಶಪಡಿಸಲು ಹೋಗಿ ನಾವು ಅದೇ ದೌಷ್ಟ್ಯವನ್ನೂ ಅಕೃತ್ಯವನ್ನೂ ಎಸಗುವುದೇ? ಪರಲೋಕದಲ್ಲಿ ಇಬ್ಬರೂ ಕೂಡಿ ನರಕವನ್ನು ಅನುಭವಿಸಬೇಕಾಗುವುದು.'' ಹೀಗೆ ಯುದ್ಧದಿಂದ ಐಹಿಕ ಹಾಗೂ ಪಾರತ್ರಿಕ ಇವೆರಡೂ ಸುಖ ಇಲ್ಲವೆಂದು ಅರ್ಜುನನು ಪ್ರತಿಪಾದಿಸುತ್ತಿದ್ದಾನೆ. ಇಷ್ಟೇ ಅಲ್ಲದೆ, ಯುದ್ಧದಿಂದ ಲೋಕವ್ಯವಸ್ಥೆಯು ಬುಡಮೇಲಾಗಿ ಅದರಿಂದ ಆಗಬಹುದಾದ ಅನರ್ಥಗಳಿಗೆ ತಾನು ಹೊಣೆಗಾರನಾಗುವೆನೆಂಬ ಆಶಂಕೆಯನ್ನೂ | ಅರ್ಜುನನು ವ್ಯಕ್ತಪಡಿಸುತ್ತಾನೆ. ""ಯುದ್ಧದಿಂದ ದೊಡ್ಡ ಪ್ರಮಾಣದಲ್ಲಿ ಕುಲನಾಶವಾಗು ತ್ತದೆ. ಕುರುಕ್ಷೇತ್ರದಲ್ಲಿ ಪ್ರತಿ ಮನೆಯಿಂದ ಎಂಬಂತೆ ವಿಶೇಷ ಪ್ರಮಾಣದಲ್ಲಿ ತೀ ಆತತಾಯಿ:: ವಿಷ್ಯ ಬೆಂಕಿಮುಂತಾದ ಮಾರ್ಗಗಳಿಂದಕೊಲ್ಲಲು ಪ್ರಯತ್ನಿಸುವವನು ಆತತಾಯಿ. ಆತ್ಮರಕ್ಷಣೆಗಾಗಿ ಇಂತಹವನನ್ನು ಕೊಲ್ಲಬೇಕೆಂದು ಶಾಸ್ತ್ರವಚನವಿದೆ. ಸೈನಿಕರ ಜಮಾವಣೆಯಾಗಿದೆ. ಇವರೆಲ್ಲರನಾಶದಿಂದ ಪುರುಷಸಂಖ್ಯೆಯ ಹಾನಿ ಅಪಾರವಾಗುವುದು. ನಿರುವಾಯರಾಗಿ ಸ್ತ್ರೀಯರು ತಪ್ಪುದಾರಿ ತುಳಿಯಲು ಅವಕಾಶವಾಗುವುದು. ವರ್ಣಸಂಕರವಾಗಬಹುದು. ಲೋಕವ್ಯವಸ್ಥೆಯು ಅಸ್ಪವ್ಯಸ್ತವಾಗಬಹುದು. ಅನೀತಿ ಅನಾಚಾರಗಳ ತಾಂಡವವಾಗಬಹುದು'' -ಎಂಬುದೇ ಅರ್ಜುನನ ಆಶಂಕೆ. ದ್ವಿತೀಯ ಮಹಾ ಯುದ್ಧದ ನಂತರದ ಕೆಲವು ಸಂಗತಿಗಳನ್ನು ನೋಡಿದರೆ ಅರ್ಜುನನ ಈ ಆಶಂಕೆಗೂ ಆಧಾರವಿದೆ ಎಂದು ನಮಗೆ ಅನಿಸಬಹುದು. ಹೀಗೆ ವೈಯಕ್ತಿಕವಾಗಿ ಐಹಿಕ ಪಾರತ್ರಿಕ ಸುಖಗಳಿಗೆ ವಿಘಾತಕವೂ ಹಾನಿಕಾರಕವೂ ವ್ಯವಸ್ಥಾಹಾನಿಯಿಂದ ಸಮಾಜಘಾತಕವೂ ಆದ ಈ ಯುದ್ಧದಲ್ಲಿ ತಾನು ತೊಡಗುವುದಿಲ್ಲವೆಂದು ಅರ್ಜುನನು ಪಟ್ಟುಹಿಡಿಯು ತ್ತಾನೆ. ತಾನು ಭಿಕ್ಷೆಬೇಡಿಯಾದರೂ ಜೀವಿಸಬಲ್ಲೆ; ಅಥವಾ ವಾನಪ್ರಸ್ಥನಾಗಿ ಅರಣ್ಯಕ್ಯೂಹೋಗಬಲ್ಲೆ ಬಂಧುಹತ್ಯೆಯಂತಹ ನಿರ್ದಯ ಕಾರ್ಯವನ್ನು ರಾಜ್ಯದ ಆತೆಗಾಗಿ ಮಾಡಲಾರೆನೆಂದು ತೀವ್ರ ಮಾನಸಿಕ ಉದ್ವೇಗಕ್ಕೆ ಒಳಗಾದ ಅರ್ಜುನನು ಬಲವಾಗಿ ಪ್ರತಿಪಾದಿಸಿ ಶಸ್ತ್ರವನ್ನು ಕೆಳಗಿಡುವನು. ಶ್ರೀಕೃಷ್ಣನು '್ಲೀಬವೃತ್ತಿಯನ್ನು ಅನುಸರಿಸದಿರು. ಹೃದಯದೌರ್ಬಲ್ಯವನ್ನು ಕಿತ್ತೊಗೆದು ವೀರನಾಗಿ ಎದ್ದೇಳು.'' ಎಂದು ಬೋಧಿಸಿದರೂ ಅರ್ಜುನನ ಚಿತ್ತವೃತ್ತಿಯಲ್ಲಿ ಏನೂ ಬದಲಾವಣೆ ಆಗುವುದಿಲ್ಲ. ಬಂಧುಹತ್ಯೆಯಿಂದ ದೊರಕಬಹುದಾದ ಇಡೀ ಭೂಲೋಕದ ಅಧಿವತ್ಯವನ್ನಾಗಲಿ ಸ್ವರ್ಗರಾಜ್ಯವನ್ನಾಗಲಿ ತಾನು ಬಯಸಲಾರೆನೆಂದು ವ್ಯಾಮೋಹದ ಪರಾಕಾಷ್ಠೆಯಿಂದ ವ್ಯವಹರಿಸುತ್ತಾನೆ. ಪಾರತ್ರಿಕ ಸುಖದೊರೆತರೂ ತಾನು ಬಂಧುಗಳನ್ನು ಹಿಂಸಿನಲಾರೆನೆಂದು ಹಠ ಹಿಡಿಯುತ್ತಾನೆ. ವಿಕ್ಸಿವಚಿತ್ತನಾಗಿ ಶ್ರೀಕೃಷ್ಣನನ್ನು ಪ್ರಾರ್ಥಿಸಿಕೊಳ್ಳುತ್ತ ತಾನು ಕರ್ತವ್ಯಮೂಢನಾಗಿರುವೆನು. ಮೋಹವಶನಾಗಿ ಸತ್ಯವನ್ನು ತಿಳಿಯಲು ಅಸಮರ್ಥನಿರುವೆನು. ಧರ್ಮಸಮ್ಮೂಢಚೇತನಾದ ತನಗೆ ಸರಿಯಾದ ದಾರಿಯನ್ನು ತೋರಿಸಿ ಗುರುವಾಗಿ ನೀನು ಉದ್ದರಿಸಬೇಕೆಂದು ಬೇಡುವನು. ಇಷ್ಟೆಲ್ಲ ವಾದಗಳನ್ನು ಮುಂದಿಟ್ಟು ಯುದ್ಧವನ್ನು ಅರ್ಜುನನು ವಿರೋಧಿಸಿದರೂ ತನ್ನ ವಾದದಲ್ಲಿ ಆತನಿಗೆ ನಂಬಿಕೆ ಇರಲಿಲ್ಲ. ತಾನು ಮೋಹ-ಕಾರ್ಪಣ್ಯಗಳಿಗೆ ಒಳಪಟ್ಟು ಅವನ್ನು ವೇದಾಂತಿಕ ಭಾಷೆಯಿಂದ ಮುಚ್ಚಿಡಲು ಪ್ರಯತ್ನಿಸುತ್ತಿದ್ದೇನೆಂದು ಅರ್ಜುನನಿಗೂ ಅರಿವಾಗಿತ್ತು. ಬಂಧುವ್ಯಾಮೋಹ, ಧರ್ಮಭೀರುತ್ವ ಒಂದೆಡೆ. ಕರ್ತವ್ಯದ ಕರೆ ಇನ್ನೊಂದೆಡೆ, ಈ ಅಂತರ್ದ್ವಂದ್ವದಲ್ಲಿ ಸಿಲುಕಿದ ಅರ್ಜುನನಿಗೆ ನಿಶ್ಚಿತ ಪಥವು ಗೋಚರ ವಾಗದೆ, ಗುರುವಾಗಿ ತನಗೆ ಮಾರ್ಗದರ್ಶನ ಮಾಡಿ ಉದ್ಭರಿಸಬೇಕೆಂದು ಶ್ರೀಕೃಷ್ಣಪರಮಾತ್ಮನಲ್ಲಿ ಶರಣಾಗತನಾಗುವನು.
Source: Gitasaroddhara — pages/page-0022.txt p.22, lines 6-30; pages/page-0023.txt p.23, lines 3-31; pages/page-0024.txt p.24, lines 3-29; pages/page-0025.txt p.25, lines 3-8
ಅರ್ಜುನಃ ಉವಾಚ- ಅರ್ಜುನನು ನುಡಿದನು ಸೇನಯೋಃ ಉಭಯೋಃ ಮಧ್ಯೇ ರಥಮ್ ಸ್ಥಾಪಯ ಮೇ ಅಚ್ಯುತ -- 'ಅಳಿವಿರದ ಕೃಷ್ಣನೇ' ಎರಡು ಪಡೆಗಳ ನಡುವೆ ನನ್ನ ರಥವನ್ನು ನಿಲ್ಲಿಸು. ಈ ಶ್ಲೋಕದಲ್ಲಿ ನಾವು ಸೂಕ್ಷ್ಮವಾಗಿ ಅರ್ಜುನನ ಅಹಂಕಾರದ ಧ್ವನಿಯನ್ನು ಗಮನಿಸಬೇಕು. we’ ಅಂದರೆ ನನ್ನ'. ಅರ್ಜುನನ ರಥದ ಸಾರಥ್ಯವನ್ನು ಸ್ವಯಂ ಶ್ರೀಕೃಷ್ಣ ವಹಿಸಿದ್ದರೂ ಕೂಡಾ, ಇಲ್ಲಿ ಅಹಂಕಾರದಲ್ಲಿ ಆತ ಕೃಷ್ಣನನ್ನು ಸಾಮಾನ್ಯ ಸಾರಥಿಯಂತೆ ಮಾತನಾಡಿಸಿ, " ನನ್ನ ರಥವನ್ನು ಎರಡೂ ಸೈನ್ಯಗಳ ಮಧ್ಯದಲ್ಲಿ ನಿಲ್ಲಿಸು ಎಂದು ಆಜ್ಞೆ ಮಾಡುವ ಧ್ವನಿಯಲ್ಲಿ ಹೇಳುತ್ತಾನೆ. ಇಲ್ಲಿ ಅರ್ಜುನ ಶ್ರೀಕೃಷ್ಣನನ್ನು ಅಚ್ಯುತ ಎಂದು ಸಂಬೋಧಿಸಿದ್ದಾನೆ. ಅಚ್ಯುತ ಎಂದರೆ ಸ್ವಯಂ ಚ್ಯುತಿ ಇಲ್ಲದ, ಭಕ್ತರ ಚ್ಯುತಿಯನ್ನು ಹರಣ ಮಾಡುವ ಭಗವಂತ. ಬಾಹ್ಯವಾಗಿ ಅಹಂಕಾರ ತೋರಿದರೂ ಕೂಡಾ, ಅರ್ಜುನನ ಅಂತರಾತ್ಮ ಮಾತ್ರ ಎಚ್ಚರದಿಂದಿತ್ತು, ಆ ಅಂತರಾತ್ಮ ಆತನ ಬಾಯಲ್ಲಿ ಈ ನಾಮವನ್ನು ನುಡಿಸಿದೆ. ಅಹಂಕಾರ ಎಂತಹ ಮಹಾತ್ಮರನ್ನೂ ಬಿಟ್ಟಿಲ್ಲ. ಒಮ್ಮೆ ನಮ್ಮ ಕೈಯಲ್ಲಿ ಬಲವಿದೆ ಎಂದು ತಿಳಿದಾಗ ನಾವು ಎಲ್ಲವನ್ನೂ ಮರೆತು ಅಹಂಕಾರದ ದಾಸರಾಗುತ್ತೇವೆ. ಈ ಅಹಂಕಾರ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ. ಅರ್ಜುನ ಮಹಾಜ್ಞಾನಿ ಮತ್ತು ಶ್ರೀಕೃಷ್ಣನ ಭಕ್ತ. ತನ್ನ ಭಕ್ತ ಅಹಂಕಾರಕ್ಕೊಳಪಟ್ಟಾಗ, ಶ್ರೀಕೃಷ್ಣ ಯಾವ ರೀತಿ ಪ್ರತಿಕ್ರಿಯೆ ತೋರುತ್ತಾನೆ ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.
Source: Bhagavad Gita Pravachana — pages/page-0024.txt p.24, lines 12-26
(21) And told Hrishikesha31 the following words. ‘O Achyuta!32 Place my chariot in between the two armies.’
Source: The Bhagavad Gita — structure/page-0041.json p.41, lines 1-1; pages/page-0042.txt p.42, lines 34-34; pages/page-0043.txt p.43, lines 1-2
Reader discussion
No public reader discussion yet.